ಜಿಲ್ಲಾ ಪಂಚಾಯತ್ ಸದಸ್ಯ ಪಿ.ವಾಗೀಶ್ ನಿಧನ

vageesh
Share on facebook
Share on twitter
Share on linkedin
Share on whatsapp
Share on telegram
Share on email
Share on print

ಚನ್ನಗಿರಿ (06-11-2020): ಜಿಲ್ಲಾ ಪಂಚಾಯತ್ ಸದಸ್ಯ, ಸಜ್ಜನ ರಾಜಕಾರಣಿ ಪಿ.ವಾಗೀಶ್ ನಿಧನರಾಗಿದ್ದಾರೆ.

ನಿವೃತ್ತ ಶಿಕ್ಷಕರು ಸಜ್ಜನ ರಾಜಕಾರಿಣಿಯಾಗಿದ್ದ ಪಿ.ವಾಗಿಶ್.  ಕಳೆದ  ತಿಂಗಳ ಹಿಂದೆ ಅನಾರೋಗ್ಯದ ಹಿನ್ನಲೆಯಲ್ಲಿ ಇವರು ಬೆಂಗಳೂರಿನ ಖಾಸಗಿ  ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕೆಲ ದಿನಗಳ ಹಿಂದೆ ಕೊರೋನ ರೋಗದ ಲಕ್ಷಣ ಕಂಡು ಬಂದಿತ್ತು ನಂತರ ಕೋವಿಡ್ ನೆಗೆಟಿವ್ ಬಂದಿದ್ದು, ಈ ವೇಳೆ ಇವರಿಗೆ ಅನಾರೋಗ್ಯ ಮತ್ತಷ್ಠು ಹೆಚ್ಚಾಗಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇವರು ಶಿಕ್ಷಕ ವೃತ್ತಿಯಲ್ಲಿದ್ದು ನಿವೃತ್ತಿ ಹೊಂದಿದ್ದರು, ನಂತರದಲ್ಲಿ ಮಾಜಿ ಮುಖ್ಯಮಂತ್ರಿಯಾದ ದಿವಂಗತ ಜೆಹೆಚ್ ಪಾಟೀಲರ ಒಡನಾಡಿಯಾಗಿದ್ದರು. ಇವರು ನಿವೃತ್ತಿ ಜೀವನದಲ್ಲಿ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ  ತಮ್ಮನ್ನು ತೊಡಗಿಸಿಕೊಂಡಿದ್ದರು.ಇವರು ಜನತದಳ ಪಕ್ಷದಿಂದ ಗುರುತಿಸಿಕೊಂಡಿದ್ದ ಇವರು ಎರಡು ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು, ನಂತರ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡು ಸಂತೇಬೆನ್ನೂರು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ  ರಾಜಕಾರಣ ಪ್ರವೇಶ ಮಾಡಿದರು. ಈ ಮೂಲಕ ಸಂತೇಬೆನ್ನೂರು ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯರಾಗಿ ಆಯ್ಕೆಯಾಗಿ  ಇವರು ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯು ಕೆಲಸವನ್ನು ನಿರ್ವಹಿಸಿದ್ದರು.

ಸಾರ್ವಜನಿಕರು, ಅಭಿಮಾನಿಗಳು,  ರಾಜಕಾರಣಿಗಳು, ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಕಂಬನಿ ಮಿಡಿದಿದ್ದಾರೆ.ಮೃತರಿಗೆ ಪತ್ನಿ, ಇಬ್ಬರು ಹೆಣ್ಣುಮಕ್ಕಳು ಮತ್ತು ಓರ್ವ ಮಗ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯ ಕ್ರಿಯೆ ಶುಕ್ರವಾರ ಮದ್ಯಾಹ್ನ 12 ಗಂಟೆ ಸಂತೇಬೆನ್ನೂರಿನ  ಜಮೀನಿನಲ್ಲಿ ವೀರಶೈವ ಸಮಾಜದ ವಿಧಿ ವಿಧಾನಗಳಂತೆ ನೇರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು