ಚಿಕ್ಕಮಗಳೂರು(25-11-2020): ಈಜಲು ಹೋದ ಐವರು ಯುವಕರು ನೀರುಪಾಲಾದ ದಾರುಣ ಘಟನೆ ಚಿಕ್ಕಮಗಳೂರಿನ ವಸ್ತಾರೆಯ ಹಿರೇಕೆರೆಯಲ್ಲಿ ನಡೆದಿದೆ.
ದಿಲೀಪ್ (24), ಸಂದೀಪ್ (23), ರಘು (22), ದೀಪಕ್ (25) ಸುದೀಪ್ (22) ನಾಪತ್ತೆಯಾದ ಯುವಕರು. ಇವರಲ್ಲಿ ಸಂದೀಪ್ ಎಂಬಾತನ ಮೃತದೇಹ ನೀರಿನಲ್ಲಿ ಪತ್ತೆಯಾಗಿದ್ದು, ನಾಲ್ವರ ಮೃತದೇಹಕ್ಕೆ ಶೋಧ ಕಾರ್ಯ ನಡೆಯುತ್ತಿದೆ.
ಇವರಲ್ಲಿ ಮೂವರು ವಸ್ತಾರೆ ಗ್ರಾಮದಲ್ಲಿ ಬೀಗರ ಊಟಕ್ಕೆ ಬಂದು ಗ್ರಾಮಸ್ಥರ ಜೊತೆ ಹಿರೇಕೆರೆಗೆ ಈಜಲು ತೆರಳಿದ್ದರು. ಸ್ಥಳಕ್ಕೆ ಪೊಲೀಸ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮೃತದೇಹಕ್ಕೆ ಶೋಧ ಕಾರ್ಯ ನಡೆಸುತ್ತಿದ್ದಾರೆ.