ಕಂಬಕ್ಕೆ ಕಟ್ಟಿ ಹಾಕಿ ಯುವಕನಿಗೆ ಥಳಿತ!

assult
Share on facebook
Share on twitter
Share on linkedin
Share on whatsapp
Share on telegram
Share on email
Share on print

ಚಿತ್ರದುರ್ಗ (20-11-2020): ಪ್ರೀತಿಸಿದ ಯುವತಿಯ ಕುಟುಂಬಸ್ಥರು ಯುವಕನೋರ್ವನನ್ನು ಕಂಬಕ್ಕೆ ಕಟ್ಟಿ ಹಾಕಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಚಿತ್ರದುರ್ಗದ ಚಳ್ಳಕೆರೆ ತಾಲೂಕಿನ ಹೊಸಮುಚ್ಚುಕುಂಟೆ ಗ್ರಾಮದಲ್ಲಿ ನಡೆದಿದೆ.ಈ ಘಟನೆ 4 ದಿನಗಳ ಮೊದಲೇ ನಡೆದಿದೆ. ಈ ಕುರಿತ ವಿಡಿಯೋ ಈಗ ವೈರಲ್ ಆಗಿದೆ.

ಚಿಕ್ಕಮ್ಮನಹಳ್ಳಿ ಗ್ರಾಮದ ಪ್ರತಾಪ್ ಮತ್ತು ಆತನ ಸ್ನೇಹಿತರು ಈ ಹಿಂದೆ ಗ್ರಾಮದ ಯುವತಿಯನ್ನು ಕಿಡ್ನಾಪ್ ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಪ್ರಕರಣ ಚಳ್ಳಕೆರೆ ಪೋಲಿಸ್ ಠಾಣೆಯ ಮೆಟ್ಟಿಲೇರಿತ್ತು. ಠಾಣೆಯಲ್ಲಿ ಸಂಧಾನ ನಡೆಸಿ ಎರಡು ಕಡೆಯವರು ತೆರಳಿದ್ದರು.

ನ.16 ರಂದು ಯುವತಿ ಪ್ರಿಯಕರನನ್ನು ಕರೆ ಮಾಡಿ ತನ್ನ ಊರಿಗೆ ಕರೆಸಿಕೊಂಡು ಇಬ್ಬರು ಮಾತಾನಾಡುತ್ತಿದ್ದರು. ಈ ವೇಳೆ ಗಮನಿಸಿದ ಯುವತಿಯ ತಂದೆ ಇವರಿಬ್ಬರು ಮಾತನಾಡುವುದನ್ನು ಗಮನಿಸಿದ್ದಾರೆ.ಬಳಿಕ ಸಂಬಂಧಿಕರಿಗೆ, ಗ್ರಾಮಸ್ಥರಿಗೆ ಈ ವಿಚಾರ ತಿಳಿಸಿದ್ದಾರೆ. ಈ ವೇಳೆ ಬಂದ ಗ್ರಾಮಸ್ಥರು ಯುವಕನಿಗೆ ಥಳಿಸಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು