ಕೋವಿಡ್ ತಗುಲಿ ಯುವಕನ ಮರಣ | ಬಂಧುಗಳಿಗೆ ವೃದ್ಧರೊಬ್ಬರ ಮೃತದೇಹ ನೀಡಿದ ಆಸ್ಪತ್ರೆ ಸಿಬ್ಬಂದಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚಿತ್ರದುರ್ಗ: ಆಸ್ಪತ್ರೆಯ ಸಿಬ್ಬಂದಿಗಳ ಎಡವಟ್ಟಿನಿಂದಾಗಿ ಮೃತ ಯುವಕನ ಬಂಧುಗಳಿಗೆ ವೃದ್ಧರೊಬ್ಬರ ಮೃತದೇಹ ನೀಡಿದ ಘಟನೆ ವರದಿಯಾಗಿದೆ.

ಹಿರಿಯೂರು ತಾಲೂಕಿನ ಯುವಕನೊಬ್ಬ ಕೋವಿಡ್ ಬಾಧಿತನಾಗಿ ನಗರದ ಖಾಸಗೀ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದ. ಚಿಕಿತ್ಸೆ ನೀಡಿದರೂ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಯುವಕನು ಮೃತಪಟ್ಟಿದ್ದ.

ಆಸ್ಪತ್ರೆಯ ಸಿಬ್ಬಂದಿಗಳು ಮೃತದೇಹವನ್ನು ಆತನ ಕುಟುಂಬಕ್ಕೆ ಹಸ್ತಾಂತರಿಸಿದ್ದರು. ಮನೆಗೆ ಅಂಬ್ಯುಲನ್ಸ್ ಮೂಲಕ ತಂದ ಮೃತದೇಹಕ್ಕೆ ಅಂತ್ಯ ಸಂಸ್ಕಾರ ಮಾಡುತ್ತಿರುವಾಗ, ಕೊನೆಯ ಕ್ಷಣದಲ್ಲಿ ಕುಟುಂಬಸ್ಥರು ಆತನ ಮುಖ ನೋಡಲು ಮುಂದಾಗಿದ್ದರು. ವೇಳೆಗೆ ಯುವಕನ ಬದಲು,ಅಲ್ಲಿ ವೃದ್ಧನೊಬ್ಬನ ಮೃತದೇಹವಿರುವುದು ಕಂಡು ಬಂದಿತ್ತು.

ತಕ್ಷಣವೇ ಆಸ್ಪತ್ರೆಗೆ ಬಂದ ಕುಟುಂಬಸ್ಥರು, ಆಸ್ಪತ್ರೆಯ ಬೇಜವಾಬ್ದಾರಿತನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೋಲೀಸರು ಬಂದು ವಾತಾವರಣವನ್ನು ತಿಳಿಗೊಳಿಸಿದ ಬಳಿಕ ತಮ್ಮ ಬಂಧುವಿನ ಮೃತದೇಹವನ್ನು ಕೊಂಡೊಯ್ದುಆರಂಭದಿಂದಲೇ ಅಂತ್ಯ ಸಂಸ್ಕಾರ ಮಾಡಿದ್ದಾರೆ.

ಯುವಕನ ಬಂಧುಗಳಿಗೆ ನೀಡಲಾದ ಇನ್ನೊಂದು ಮೃತದೇಹವು ಚಿತ್ರದುರ್ಗ ನಗರದ ಅರುವತ್ತು ವರ್ಷ ವಯಸ್ಸಿನ ವೃದ್ಧರೊಬ್ಬರದೆಂದು ತಿಳಿದು ಬಂದಿದೆ. ಇಬ್ಬರೂ ಕೋವಿಡ್ ರೋಗಿಗಳಾಗಿದ್ದು, ಒಂದೇ ಆಸ್ಪತ್ರೆಯಲ್ಲಿ ಒಂದೇ ದಿನ ಮೃತಪಟ್ಟಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು