ಮುಂಬೈ(04-11-2020): ಜನಪ್ರಿಯ ಯೂಟ್ಯೂಬರ್ ನಿಜಾಮುಲ್ ಖಾನ್ ಅವರನ್ನು ಗೆಳತಿಯ ಸಹೋದರನನ್ನು ಕೊಲೆ ಮಾಡಿದ ಆರೋಪದ ಮೇಲೆ ನೋಯ್ಡಾ ಪೊಲೀಸರು ಬಂಧಿಸಿದ್ದಾರೆ.
ಖಾನ್ ಬೈಕ್ ಸಾಹಸಗಳನ್ನು ಪ್ರದರ್ಶಿಸುವ ವೀಡಿಯೊಗಳಿಗಾಗಿ ಜನಪ್ರಿಯರಾಗಿದ್ದಾರೆ ಮತ್ತು ಅವರ ಯೂಟ್ಯೂಬ್ ಚಾನೆಲ್ಗೆ 9 ಲಕ್ಷಕ್ಕೂ ಹೆಚ್ಚು ಚಂದಾದಾರರನ್ನು ಹೊಂದಿದ್ದಾರೆ.
ಬಾಲಕಿಯ ಮೃತ ಸಹೋದರನನ್ನು ಕಮಲ್ ಶರ್ಮಾ ಎಂದು ಗುರುತಿಸಲಾಗಿದೆ. ಅವರನ್ನು ಅಕ್ಟೋಬರ್ 28 ರಂದು ಗುಂಡಿಕ್ಕಿ ಕೊಲ್ಲಲಾಗಿದೆ. ನೋಯ್ಡಾದ ನಿತಾರಿ ನಿವಾಸಿಯಾಗಿದ್ದ ಕಮಲ್ ಅವರು ಕೆಲಸದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಕೊಲೆ ಮಾಡಲಾಗಿದೆ.
ಕಮಲ್ ತನ್ನ ಸಹೋದರಿಯೊಂದಿಗಿನ ನಿಜಾಮುಲ್ ಸಂಬಂಧಕ್ಕೆ ವಿರೋಧಿಯಾಗಿದ್ದನು. ಇದೇ ವಿಷಯಕ್ಕೆ ಅಂತಿಮವಾಗಿ ಕಮಲ್ ನನ್ನು ಕೊಲೆ ಮಾಡಲು ನಿಜಾಮುಲ್ ನಿರ್ಧರಿಸಿದ್ದ. ಈ ಹತ್ಯೆಯಲ್ಲಿ ಭಾಗಿಯಾಗಿರುವ ಕಾರಣಕ್ಕಾಗಿ ನೋಯ್ಡಾ ಪೊಲೀಸರು ನಿಜಾಮುಲ್ ಅವರ ಇಬ್ಬರು ಸ್ನೇಹಿತರನ್ನು ಕೂಡ ಬಂಧಿಸಿದ್ದಾರೆ.