11 ಯುವತಿಯರನ್ನು ಮದುವೆಯಾಗಿ ವಂಚಿಸಿದ 23ರ ಯುವಕ!  

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚೆನ್ನೈ(16-01-2021): ಚೆನ್ನೈ ಮೂಲದ 23 ವರ್ಷದ ಯುವಕ 11 ಯುವತಿಯರನ್ನು ಮದುವೆಯಾಗಿ ವಂಚಿಸಿರುವ ಘಟನೆ ತಡವಾಗಿ ಬಹಿರಂಗವಾಗಿದೆ.

ಚೆನ್ನೈನ ವಿಲ್ಲಿವಕ್ಕಮ್​ ನಿವಾಸಿ ಗಣೇಶ್​ 11ಯುವತಿಯರಿಗೆ ವಂಚಿಸಿದ ಆರೋಪಿ. ಈತ ಡಿಸೆಂಬರ್​ 5ರಂದು ಓಡಿ ಹೋಗಿ ಯುವತಿಯೋರ್ವಳನ್ನು ವಿವಾಹವಾಗಿದ್ದ. ಬಳಿಕ ಮನೆಯೊಂದರಲ್ಲಿ ಆಕೆಯ ಜೊತೆ ವಾಸಿಸುತ್ತಾ, ಮನೆಕೆಲಸಕ್ಕೆಂದು ಯುವತಿಯೋರ್ವಳನ್ನು ಕರೆತಂದು ಆಕೆಯ ಜೊತೆ ಕಾಮದಾಟ ಆಡಿ ಪತ್ನಿಗೆ ಸಿಕ್ಕಿಬಿದ್ದಿದ್ದಾನೆ.

ಒಂದು ದಿನ ಸ್ನೇಹಿತರನ್ನು ಮನೆಗೆ ಕರೆತಂದ ಆರೋಪಿ ಪತ್ನಿಯ ಜತೆ ಮೃಗೀಯವಾಗಿ ವರ್ತಿಸುತ್ತಾನೆ. ಇದೇ ವೇಳೆ ಜೋರಾಗಿ ಕಿರುಚಿಕೊಂಡು ಪತ್ನಿ ಮನೆಬಿಟ್ಟು ಓಡಿಹೋಗಿದ್ದಾಳೆ. ಬಳಿಕ ಈಕೆ ಪೊಲೀಸರಿಗೆ ದೂರು  ನೀಡಿದ್ದಾಳೆ.

ಘಟನೆ ಬಳಿಕ ಗಣೇಶ್ ನನ್ನು ಪೊಲೀಸರು ಬಂಧಿಸಿದ್ದು, ಈವರೆಗೆ 11 ಮಂದಿಯನ್ನು ವಿವಿಧ ಕಡೆ ವಿವಾಹವಾಗಿ ವಂಚಿಸಿರುವುದನ್ನು ಬಾಯ್ಬಿಟ್ಟಿದ್ದಾನೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು