ಬೆಂಗಳೂರು(30-10-2020): ನಿನ್ನಂಥವರು ರಾಜಕೀಯದಲ್ಲಿ ಇರಬಾರದು. ಕಾಂಗ್ರೆಸ್ ತಾಯಿಗೆ ಚೂರಿ ಹಾಕಿ ಹೋದ ನಿನ್ನನ್ನು ಜನ ನಂಬ್ತಾರಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರ್ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದಾರೆ.
ಉಪಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಆರ್ಆರ್ ನಗರ ಕಾಂಗ್ರೆಸ್ ನ ಭದ್ರಕೋಟೆ. ನೀನು ಕಾಂಗ್ರೆಸ್ ಬಿಟ್ಟು ತಪ್ಪು ಮಾಡಿದ್ದಿ. ನಿನ್ನನ್ನು ಸೋಲಿಸಬೇಕೆಂದು ಜನರು ತೀರ್ಮಾನವನ್ನು ಮಾಡಿದ್ದಾರೆ. ಕಣ್ಣೀರು ಹಾಕಿದ್ರೆ ಅನುಕಂಪ ಬರುತ್ತದೆ ಎಂದುಕೊಂಡಿದ್ದರೆ ತಪ್ಪು ಎಂದು ಸಿದ್ದರಾಮಯ್ಯ ಮುನಿರತ್ನ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದಾರೆ.
ಆರ್ಆರ್ ನಗರದಲ್ಲಿ ಅಪರಾಧ ರಾಜಕಾರಣ ಹೆಚ್ಚಾಗಿದೆ. ನಿರಪರಾಧಿಗಳ ಮೇಲೆ ಸುಳ್ಳು ಕೇಸ್ ಹಾಕೋದು, ಅರೆಸ್ಟ್ ಮಾಡೋದು ಹೆಚ್ಚುತ್ತಿದೆ. ನಾನು ರೋಡ್ ಶೋ ಮಾಡುವಾಗ, ಒಂದು ಗುಂಪು ಗಲಾಟೆ ಮಾಡಿತು. ಪ್ರಜಾಪ್ರಭುತ್ವದಲ್ಲಿ ನಿರ್ಭಯವಾಗಿ ಮತ ಚಲಾಯಿಸುವ ಹಕ್ಕು ಎಲ್ಲರಿಗೂ ಇದೆ. ಹಾಗೇ ಪ್ರಚಾರ ಮಾಡಲು ಕೂಡ ಎಲ್ಲರಿಗೂ ಹಕ್ಕಿದೆ. ಆದರೆ ಹೆದರಿಸಿ, ಬೆದರಿಸಿ ವೋಟ್ ತೆಗೆದುಕೊಳ್ಳೋದು ಅನ್ಯಾಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.