ಜೌನ್ಪುರ (01-11-2020): ಹೆಣ್ಣು ಮಕ್ಕಳಿಗೆ ಗೌರವ ನೀಡದೆ ಇದ್ದರೆ ರಾಮ್ ನಾಮ್ ಸತ್ಯ ಹೇ… ಪ್ರಯಾಣ ಆರಂಭವಾಗಲಿದೆ ಎಂದೂ ಯೋಗಿ ಆದಿತ್ಯನಾಥ್ ಹೇಳಿಕೆ ಕೊಟ್ಟಿದ್ದಾರೆ.
ವಿವಾಹಕ್ಕಾಗಿ ಮತಾಂತರಗೊಳ್ಳುವುದನ್ನು ಒಪ್ಪಲಾಗದು ಎಂಬ ಅಲಹಾಬಾದ್ ಹೈಕೋರ್ಟ್ ತೀರ್ಪು ಬಗ್ಗೆ ಪ್ರಸ್ತಾಪಿಸಿದ ಯೋಗಿ ಆದಿತ್ಯನಾಥ್ ಲವ್ ಜೆಹಾದ್ ವಿರುದ್ಧ ಕಠಿಣ ಕಾನೂನು ಜಾರಿಗೆ ತರುವುದಾಗಿ ಹೇಳಿದ್ದಾರೆ.
ಲವ್ ಜಿಹಾದ್ನಲ್ಲಿ ಭಾಗಿಯಾದವರ ಪೋಸ್ಟರ್ಗಳನ್ನು ಎಲ್ಲೆಡೆ ಅಂಟಿಸಲಾಗುವುದು. ಹೆಸರು, ಗುರುತನ್ನು ಮರೆಮಾಚಿ ಹೆಣ್ಣುಮಕ್ಕಳ ಘನತೆಯೊಂದಿಗೆ ಆಟವಾಡುವವರಿಗೆ ನಾನು ಎಚ್ಚರಿಕೆ ನೀಡುತ್ತೇನೆಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.