ವಾರ್ಸಾ: 2022 ರ ಅಂತ್ಯವೇಳೆಗೆ ಜಗತ್ತು ಕೊರೋನಾದಿಂದ ಮುಕ್ತವಾಗಿ ಸಹಜ ಸ್ಥಿತಿಗೆ ಮರಳಲಿದೆ ಎಂದು ಮೈಕ್ರೋಸಾಫ್ಟ್ ನ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಸಂದರ್ಶನವೊಂದರಲ್ಲಿ ಜಗತ್ತಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ.
ಬಿಲ್ ಗೇಟ್ಸ್ ಅವರು ಪೋಲೆಂಡ್ ನ ವೃತ್ತಪತ್ರಿಕೆ ಮತ್ತು TVN24 ನ ಗೆಜೆಟಾ ವೈಬೊರ್ಕ್ಜಾ ಗೆ ನೀಡಿದ ಸಂದರ್ಶನವೊಂದರಲ್ಲಿ ಈ ಅಭಿಪ್ರಾಯಪಟ್ಟಿದ್ದಾರೆ.
“ಕೊರೋನಾ ವೈರಸ್ ಒಂದು ನಂಬಲಸಾಧ್ಯವಾದ ದುರಂತ.ಆದರೆ ಇದೀಗ ಪ್ರಪಂಚದಾತ್ಯಂತ ಕೋವಿಡ್ 19 ವಿರುದ್ಧ ಲಸಿಕೆಗಳು ಲಭ್ಯವಾಗುತ್ತಿರುವುದರಿಂದ 2022ರ ವೇಳೆಗೆ ಜಗತ್ತು ಕೊರೋನಾ ಮುಕ್ತವಾಗುತ್ತದೆ ಎಂದು ಅಭಿಪ್ರಾಯಪಟ್ಟರು.