ಏಕಪತ್ನಿವ್ರತ ವಿವಾದ | ಟ್ವಿಟರ್ ಮೂಲಕ ಕ್ಷಮೆ ಕೇಳಿದ ಸಚಿವ ಸುಧಾಕರ್

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು : ಸದನದಲ್ಲಿ ರಮೇಶ್ ಜಾರಕಿಹೊಳಿಯವರ ಸಿ ಡಿ ಹಗರಣದ ಬಗ್ಗೆ ತೀವ್ರ ಚರ್ಚೆಯಾಗಿದ್ದು ಹಲವು ಕಾಂಗ್ರೆಸ್ ಮುಖಂಡರು ಬಿಜೆಪಿಯನ್ನು ಟೀಕೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.

ಇದಕ್ಕೆ ತಿರುಗೇಟು ನೀಡಿದ ಆರೋಗ್ಯ ಸಚಿವ ಡಾ ಕೆ ಸುಧಾಕರ್ ರವರು “ಡಿಕೆಶಿ,ರಮೇಶ್ ಕುಮಾರ್,ಸಿದ್ದರಾಮಯ್ಯ ಇವರೆಲ್ಲರೂ ಸತ್ಯಹರಿಶ್ಚಂದ್ರರಾ? ಇವರೆಲ್ಲರೂ ಏಕಪತ್ನಿವ್ರತ ಮಾಡುತ್ತಿದ್ದಾರಾ? ನಾನೂ ಸೇರಿದಂತೆ 224 ಶಾಸಕರ ಮೇಲೆಯೂ ತನಿಖೆಯಾಗಲಿ.ಆ ಸಂದರ್ಭದಲ್ಲಿ ಎಲ್ಲರ ಬಂಡವಾಳ ತಿಳಿಯುತ್ತೆ”ಎಂದು ಕಿಡಿಕಾರಿದ್ದರು.

ಈ ಹೇಳಿಕೆಯು ಭಾರೀ ವಿವಾದವನ್ನು ಸೃಷ್ಟಿಸಿದ್ದು,ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್ ಮುಖಂಡರು ಮತ್ತು ಹಲವು ಜೆಡಿಎಸ್ ಮುಖಂಡರು ಇದರ ವಿರುದ್ಧ ತಿರುಗಿಬಿದ್ದಿದ್ದರು.ಸುಧಕಾರ್ ಬಹಿರಂಗ ಕ್ಷಮೆ ಕೇಳಬೇಕು,ರಾಜಿನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದರು.

ಇದೀಗ ಸುಧಕಾರ್ ರವರು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿ ಟ್ವಿಟರ್ ಮೂಲಕ ತನ್ನ ಮಾತಿಗೆ ಸಮಜಾಯಿಷಿ ನೀಡಿ,ಶಾಸಕರೊಂದಿಗೆ ಕ್ಷಮೆ ಕೋರಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು