ಯಾವುದೇ ಕಾರ್ಯ ಯೋಜನೆಗಳ ಘೋಷಣೆಯಿಲ್ಲದೇ ಮುಗಿದ ಪ್ರಧಾನಿಯ ಭಾಷಣ | ಲಾಕ್ಡೌನನ್ನು ಕಟ್ಟಕಡೆಯ ಅಸ್ತ್ರವಾಗಿಯಷ್ಟೇ ಬಳಸುವಂತೆ ನಿರ್ದೇಶನ

modhi
Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಕೊರೋನಾ ಮಹಾಮಾರಿಯ ಎರಡನೇ ಅಲೆಯು ದೇಶಾದ್ಯಂತ ಅಪ್ಪಳಿಸಿರುವಂತೆಯೇ ಇಂದು ರಾತ್ರಿ 8:45 ರ ಹೊತ್ತಿಗೆ ಪ್ರಧಾನಿ ದೇಶವನ್ನುದ್ಧೇಶಿಸಿ ಮಾತನಾಡಿದರು. ತನ್ನ ಭಾಷಣದಲ್ಲಿ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ಯಾವುದೇ ಕಾರ್ಯಯೋಜನೆಗಳ ಬಗೆಗೆ ಘೋಷಣೆ ಮಾಡಲಿಲ್ಲ.

ಭಾಷಣದಲ್ಲಿ ದೇಶದ ಜನರು ಧೈರ್ಯದಿಂದಿರುವಂತೆ ವಿನಂತಿಸಿದ ಮೋದಿ, ಕೊರೋನಾದ ಮೊದಲ ಅಲೆಯಲ್ಲಿ ಜನರು ತೋರಿಸಿದ ಧೈರ್ಯ, ಸಂಯಮವನ್ನೇ ಈಗಲೂ ಪಾಲಿಸಬೇಕೆಂದು ಕರೆ ನೀಡಿದರು.

ನಾಳೆ ರಾಮನವಮಿ. ಮರ್ಯಾದಾ ಪುರುಷೋತ್ತಮನ ಮರ್ಯಾದೆ ಹಾಗೂ ರಂಜಾನ್ ಕಲಿಸುವ ಸಂಯಮವನ್ನು ಕೋವಿಡ್ ವಿರುದ್ಧದ ಹೋರಾಟದಲ್ಲಿ ಪಾಲಿಸುವಂತೆ ಹೇಳಿದರು. ಲಾಕ್ಡೌನ್ ಹೇರಬಾರದು. ಲಾಕ್ಡೌನನ್ನು ಕಟ್ಟಕಡೆಯ ಅಸ್ತ್ರವಾಗಿಯಷ್ಟೇ ಬಳಸುವಂತೆ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿದರು. ಅದರ ಬದಲು ಮೈಕ್ರೋ ಕಂಟೈನ್ಮೆಂಟ್ ಝೋನುಗಳಂತಹಾ ಸಣ್ಣ ಪ್ರಮಾಣದ ನಿರ್ಬಂಧಗಳನ್ನು ಹೆಚ್ಚು ಬಳಸಬೇಕೆಂದರು. ಲಾಕ್ಡೌನಿಗೆ ಅವಕಾಶ ಕೊಡದಂತೆ ಜನರನ್ನು ವಿನಂತಿಸಿದರು.

ಕೊರೋನಾದ ಮೊದಲ ಅಲೆಯಂತಲ್ಲದೇ ಹೊಸ ಅಲೆಯು ಬರುವ ಹೊತ್ತಿಗೆ ದೇಶವು ಲಸಿಕೆಗಳಂತಹಾ ಸಾಕಷ್ಟು ವೈದ್ಯಕೀಯ ಸವಲತ್ತುಗಳನ್ನು ಹೊಂದುವಂತಾಗಿದೆ ಎಂದರು. ಆದರೆ ಈಗ ದೇಶದಲ್ಲಿ ಕಂಡು ಬರುತ್ತಿರುವ ತೀವ್ರ ವೈದ್ಯಕೀಯ ಸವಲತ್ತುಗಳ ಕೊರತೆಯ ಬಗ್ಗೆ ಮಾತನಾಡಲಿಲ್ಲ.

ಯಾವುದೇ ಕಾರಣಕ್ಕೂ ಯಾರೂ ಧೈರ್ಯಗುಂದಬೇಡಿ. ಕೊರೋನಾದಿಂದ ಮಡಿದವರ ಬಂಧುಗಳ ದುಃಖದಲ್ಲಿ ತಾನೂ ಭಾಗಿಯಾಗುತ್ತೇನೆ ಎಂದರು. ಅನಗತ್ಯವಾಗಿ ಮನೆಯಿಂದ ಹೊರಗೆ ಸುತ್ತಾಡಲು ಹೋಗಬೇಡಿ. ಲಾಕ್ಡೌನ್ ಹೇರುವಂತೆ ಮಾಡಬೇಡಿ. ಇದರಿಂದಾಗಿ ಜನಜೀವನ ಹಾಗೂ ದೇಶದ ಅರ್ಥ ವ್ಯವಸ್ಥೆ ಹಾಳಾಗುವುದು ತಪ್ಪುತ್ತದೆ ಎಂದರು.

ಎಲ್ಲಾ ಊರು, ಮೊಹಲ್ಲಾಗಳಲ್ಲೂ ಸಣ್ಣ ಸಣ್ಣ ಸಮಿತಿ ಕಟ್ಟಿಕೊಂಡು ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಪ್ರೇರಣೆ ನೀಡಬೇಕೆಂದು ಸಲಹೆ ನೀಡಿದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು