ಯಡಿಯೂರಪ್ಪನವರೇ, ಸ್ವಘೋಷಿತ ‘ರಾಜಾಹುಲಿ’ಯಂತೆ ನಡೆದುಕೊಳ್ಳಿ, ‘ರಾಜಾ ಇಲಿ’ ಆಗಬೇಡಿ: ಮಾಜಿ ಸಿಎಂ ಸಿದ್ದರಾಮಯ್ಯ ಲೇವಡಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಬೊಮ್ಮನಹಳ್ಳಿ ವಾರ್ ರೂಮ್‌ನಲ್ಲಿ ದುಂಡಾವರ್ತನೆ ನಡೆಸಿದ್ದ  ಶಾಸಕರು ಮತ್ತು ಬೆಂಬಲಿಗರನ್ನು ತಕ್ಷಣ ಬಂಧಿಸಿ. ಕೊರೊನಾ ವಾರಿಯರ್ಸ್ ಮೇಲಿನ ದೌರ್ಜನ್ಯಕ್ಕೆ ಆರು ತಿಂಗಳಿಂದ ಏಳು ವರ್ಷ ಜೈಲು, ಒಂದು‌ ಲಕ್ಷ ರೂ.ಗಳಿಂದ ಏಳು ಲಕ್ಷ ರೂ ವರೆಗೆ ದಂಡ ವಿಧಿಸಬಹುದು. ಇದೇ ಕಾಯ್ದೆಯಡಿ ಶಾಸಕ ಸತೀಶ್ ರೆಡ್ಡಿ ಮತ್ತು ಬೆಂಬಲಿಗರನ್ನು ತಕ್ಷಣ ಬಂಧಿಸಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ಭಾಗಿಯಾದವರನ್ನು ಬಂಧಿಸುವಂತೆ ಒತ್ತಾಯಿಸಿದ ಅವರು,
ಏನಿದು ಯಡಿಯೂರಪ್ಪನವರೇ? ರಾಜ್ಯದಲ್ಲಿರುವುದು ಚುನಾಯಿತ ಸರ್ಕಾರವೇ? ಇಲ್ಲವೇ ನಿಮ್ಮ ಶಾಸಕರು,‌ ಸಂಸದರು ಮತ್ತು  ಅವರ ಬೆಂಬಲಿಗರ ಗೂಂಡಾ ರಾಜ್ಯವೇ? ಬಿಜೆಪಿ ಸಂಸದರು/ಶಾಸಕರ ಬೆಡ್ ಬ್ಲಾಕ್ ದಂಧೆ ಕಾರ್ಯಚರಣೆಯ ಉದ್ದೇಶ ಬಿಬಿಎಂಪಿ ಭ್ರಷ್ಟಚಾರ ಬಯಲುಗೊಳಿಸುವುದಲ್ಲ, ಅದರ ದುರುದ್ದೇಶ ತಮ್ಮ ಸ್ವಜನಪಕ್ಷಪಾತ ಮತ್ತು ಗೂಂಡಾಗಿರಿಯನ್ನು ಮುಚ್ಚಿಹಾಕುವುದು ಎನ್ನುವುದು ಜಗಜ್ಜಾಹೀರಾಗಿದೆ. ಮೊದಲು ಇವರನ್ನು ಬಂಧಿಸಿ ಎಂದಿದ್ದಾರೆ.

ಬಿಜೆಪಿ ಶಾಸಕರು,‌ ಸಂಸದರು ಮತ್ತು ಬೆಂಬಲಿಗರ ದೌರ್ಜನ್ಯ ಮತ್ತು ಬೆದರಿಕೆ ಬಿಬಿಎಂಪಿ ದಕ್ಷಿಣ ವಲಯದ ವಾರ್ ರೂಮ್‌ಗೆ ಸೀಮಿತವಾದುದಲ್ಲ, ಇದು ನಗರದಾದ್ಯಂತ ನಡೆದಿದೆ. ನಗರದಲ್ಲಿ‌ ಕೊರೊನಾ ಉಲ್ಭಣಿಸಲು ಇವರ ಈ ದುಂಡಾವರ್ತನೆ ಕೂಡಾ ಕಾರಣ. ಈ ಬಗ್ಗೆ ಸಮಗ್ರ ಸ್ವರೂಪದ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.

ಕೋಮು ಘರ್ಷಣೆಗೆ ಪ್ರಚೋದನೆ ಕೂಡಾ ತೇಜಸ್ವಿ ಸೂರ್ಯ ಮತ್ತು‌ ಸಂಗಡಿಗರ ಕಾರ್ಯಾಚರಣೆಯ ದುರುದ್ದೇಶ ಎನ್ನುವುದು ಬಯಲಾಗಿದೆ. #IPC153A ಅನ್ವಯ ಈ ದುಷ್ಟಕೂಟದ ವಿರುದ್ಧ  ಮೊಕದ್ದಮೆ ದಾಖಲಿಸಲು ಮುಖ್ಯಮಂತ್ರಿಗಳು ಪೊಲೀಸರಿಗೆ ಮುಕ್ತ ಹಸ್ತ ನೀಡಬೇಕು.

ಬೆಡ್ ಬ್ಲಾಕ್ ದಂಧೆ ವಿರುದ್ಧದ ತೇಜಸ್ವಿ ಸೂರ್ಯ ಮತ್ತು ಶಾಸಕರ ನಕಲಿ ಕಾರ್ಯಾಚರಣೆ ಪರೋಕ್ಷವಾಗಿ‌ ನಿಮ್ಮ ವಿರುದ್ಧದ ಕಾರ್ಯಚಾರಣೆಯೂ ಹೌದು. ಯಡಿಯೂರಪ್ಪ ಅವರೇ, ಈ ಒಂದು ಪ್ರಕರಣದಲ್ಲಿಯಾದರೂ ಸ್ವಘೋಷಿತ ‘ರಾಜಾಹುಲಿ’ಯಂತೆ ನಡೆದುಕೊಳ್ಳಿ, ‘ರಾಜಾ ಇಲಿ’ ಆಗಬೇಡಿ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು