ಯಡಿಯೂರಪ್ಪನವರೇ ಇಷ್ಟೊಂದು ದ್ವೇಷ ಮಾಡಲು ಸಾರಿಗೆ ನೌಕರರೇನು ಪಾಕಿಸ್ತಾನದವರೇ? : ಕಾಂಗ್ರೆಸ್ ಪ್ರಶ್ನೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಸಾರಿಗೆ ನೌಕರರ ವೇತನ ತಡೆ ಹಿಡಿದ ಬಿಜೆಪಿ ಸರ್ಕಾರದ ಕ್ರಮ ಮನುಷ್ಯತ್ವವಿಲ್ಲದ ಸರ್ವಾಧಿಕಾರಿ ನಡೆ ಎಂದು ಕಾಂಗ್ರೆಸ್ ಆರೋಪಿಸಿದೆ‌

ಈ ಕುರಿತು ಕಾಂಗ್ರೆಸ್ ಸರಣಿ ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ನೀತಿಯನ್ನು ಖಂಡಿಸಿದೆ.
“ಬಿ.ಎಸ್. ಯಡಿಯೂರಪ್ಪನವರೇ, ಇಷ್ಟೊಂದು ದ್ವೇಷ ಮಾಡಲು ಸಾರಿಗೆ ನೌಕರರೇನು ಪಾಕಿಸ್ತಾನದವರೇ?
ಸರ್ಕಾರ ಮೊಂಡುತನ ಬಿಟ್ಟು ನೌಕರರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡಬೇಕು.
ಪ್ರಯಾಣಿಕರ, ನೌಕರರ ಹಿತ ಕಾಯುವ ಕೆಲಸ ಮಾಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.

“ನೌಕರರಿಗೆ ಖಾಸಗಿ ಬಸ್‌ಗಳ ಬೆದರಿಕೆ ತೋರಿಸುತ್ತಿರುವ ಲಕ್ಷ್ಮಣ ಸವದಿ ಅವರೇ
ಸಾರ್ವಜನಿಕರ ಹಿತವನ್ನ ಯೋಚಿಸಿದ್ದೀರಾ?
ಹಬ್ಬ ಹರಿದಿನಗಳಲ್ಲಿ ದುಪ್ಪಟ್ಟು ದರ ಸುಲಿಗೆಗೆ ನಿಯಂತ್ರಣ ಹೇರಿದ್ದೀರಾ? ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಕ್ರಮ ಕೈಗೊಂಡಿದ್ದೀರಾ? ಬಿಜೆಪಿ ಸರ್ಕಾರಕ್ಕೆ ನೌಕರರ ಹಿತವೂ ಬೇಕಿಲ್ಲ, ಜನರ ಸುರಕ್ಷತೆಯೂ ಬೇಕಿಲ್ಲ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರಿಗೆ ತಿರುಗೇಟು ನೀಡಿದೆ.

ಕಳೆದ ಡಿಸೆಂಬರ್‌ನಿಂದಲೇ ಸಾರಿಗೆ ನೌಕರರು ತಮ್ಮ ಬೇಡಿಕೆಗಳಿಗಾಗಿ ಆಗ್ರಹಿಸುತ್ತಾ ಬಂದಿದ್ದರೂ ಬೇಜವಾಬ್ದಾರಿ ಬಿಜೆಪಿ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಇಂದು ಮತ್ತೆ ಸಾರ್ವಜನಿಕರು ಪರದಾಡಬೇಕಾಗಿದೆ. ಈ ಸಿಡಿ ಸರ್ಕಾರ ಇಷ್ಟು ದಿನಗಳಲ್ಲಿ ನೌಕರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದರಲ್ಲಿ ಸೋತಿದೆ ಎಂದು ಕಾಂಗ್ರೆಸ್ ಬಿಜೆಪಿ ವಿರುದ್ಧ ಟ್ವೀಟ್ ಸಮರ ಮುಂದುವರಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು