ಯಾದಗಿರಿ(14-10-2020): ಯಾದಗಿರಿ ಜಿಲ್ಲೆಯಲ್ಲಿ ಮಳೆಯ ಅಬ್ಬರಕ್ಕೆ 2000ಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.
ಶಹಾಪುರ,ಸುರಪುರ, ವಡಗೇರಾ, ಗುರುಮಠಕಲ್,ಯಾದಗಿರಿ, ಹುಣಸಗಿ ತಾಲೂಕಿನ ವಿವಿಧ ಹಳ್ಳಿಗಳಲ್ಲಿ ಮನೆಗಳು ಕುಸಿದು ಬಿದ್ದು ಹಾನಿಯಾಗಿವೆ. ಜಿಲ್ಲೆಯ ಮುನಮುಟಗಿ, ಕಾಡಂಗೇರಾ, ಶಾರದಹಳ್ಳಿ, ಬಬಲಾದ, ರಸ್ತಾಪುರ ಹಾಗೂ ಮೊದಲಾದ ಗ್ರಾಮೀಣ ಭಾಗದಲ್ಲಿ ಮನೆಗಳು ಕುಸಿದು ಬಿದ್ದಿದೆ.
ಜಿಲ್ಲಾಧಿಕಾರಿ ಡಾ.ರಾಗಾಪ್ರಿಯಾ ಮಾತನಾಡಿ, ಸೆಪ್ಟೆಂಬರ್ ತಿಂಗಳಲ್ಲಿ 2 ಸಾವಿರ ಮನೆಗಳು ಭಾಗಶಃ ಬಿದಿದ್ದು ಈಗ ನಾಲ್ಕು ದಿನಗಳ ಮಳೆಗೆ 98 ಮನೆಗಳಿಗೆ ಹಾನಿಯಾಗಿವೆ. ಈ ಬಗ್ಗೆ ಸರಕಾರಕ್ಕೆ ವರದಿ ಸಲ್ಲಿಸಿ ಪರಿಹಾರ ನೀಡಲಾಗುತ್ತದೆ ಎಂದು ಹೇಳಿದ್ದಾರೆ.