ವಾಷಿಂಗ್ಟನ್(07/10/2020): ಕೋವಿಡ್–19ನ ಹಾವಳಿಯಿಂದಾಗಿ ಮುಂದಿನ ದಿನಗಳಲ್ಲಿ 15 ಕೋಟಿ ಮಂದಿ ಅತ್ಯಂತ ಕಡುಬಡವರಾಗಲಿದ್ದಾರೆ ಎಂದು ವಿಶ್ವ ಬ್ಯಾಂಕ್ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಕೋವಿಡ್–19 ಸಾಂಕ್ರಾಮಿಕ ಕಾಯಿಲೆಯಿಂದಾಗಿ ಈ ವರ್ಷವೇ 8.8 ಕೋಟಿಯಿಂದ 11.5 ಕೋಟಿ ಮಂದಿ ಬಡತನಕ್ಕೆ ಸಿಲುಕಲಿದ್ದಾರೆ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.
ಅದರೆ, ಜಗತ್ತಿನಲ್ಲೇ ಅತ್ಯಧಿಕ ಜನಸಂಖ್ಯೆ ಇರುವ ಭಾರತದ ಕುರಿತು ಇತ್ತೀಚಿನ ಯಾವುದೇ ಮಾಹಿತಿ ವರದಿಯಲ್ಲಿಲ್ಲ. ಹೀಗಾಗ ಜಾಗತಿಕ ಬಡತನದ ಬಗ್ಗೆ ಸಮಗ್ರವಾಗಿ ವರದಿ ಸಿದ್ಧಪಡಿಸಲು ಸಾಧ್ಯವಾಗಿಲ್ಲ ಎಂದು ವಿಶ್ವಬ್ಯಾಂಕ್ ಹೇಳಿದೆ.