ಭುವನೇಶ್ವರ (05-01-2021): ಸರ್ಕಾರದ ಪ್ರಾಧಿಕಾರ ಮಾಂಸ ಮಾರಾಟದ ಕೆಂಪು ಕೈಪಿಡಿಯಿಂದ ‘ಹಲಾಲ್’ ಪದವನ್ನು ತೆಗೆದು ಹಾಕಿದೆ.
ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಪಿಇಡಿಎ) ಕೆಂಪು ಮಾಂಸ ಕೈಪಿಡಿಯಿಂದ ‘ಹಲಾಲ್’ ಪದವನ್ನು ಕೈಬಿಟ್ಟಿದೆ. ಎಪಿಇಡಿಎ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದಲ್ಲಿದೆ. ಕೃಷಿ ಉತ್ಪನ್ನಗಳ ರಫ್ತು ಉತ್ತೇಜನದ ಹಿನ್ನೆಲೆಯಿಂದ ನಿರ್ಧಾರಕ್ಕೆ ಬರಲಾಗಿದೆ ಎನ್ನಲಾಗಿದೆ.
ಹೊಸ ಕೈಪಿಡಿ ಈಗ ಹೀಗಿದೆ: ಪ್ರಾಣಿಗಳ ಮಾಂಸವನ್ನು ಆಮದು ಮಾಡಿಕೊಳ್ಳುವ ದೇಶಗಳ ಆಮದಿಗೆ ಪ್ರಾಣಿಗಳನ್ನು ವಧಿಸಲಾಗುತ್ತದೆ.
ಹಳೆಯ ಆವೃತ್ತಿ: ಇಸ್ಲಾಮಿಕ್ ರಾಷ್ಟ್ರಗಳ ಅಗತ್ಯವನ್ನು ಪೂರೈಸಲು ಹಲಾಲ್ ವಿಧಾನದ ಪ್ರಕಾರ ಪ್ರಾಣಿಗಳನ್ನು ಕಟ್ಟುನಿಟ್ಟಾಗಿ ವಧಿಸಲಾಗುತ್ತದೆ. ಹಲಾಲ್ ಎನ್ನುವುದು ಇಸ್ಲಾಂ ಧರ್ಮದ ಅಡಿಯಲ್ಲಿ ಮಾಡಲಾದ ಪ್ರಾಣಿ ವಧೆ ವಿಧಾನವಾಗಿದೆ.
ಹಲವಾರು ಇಸ್ಲಾಮಿಕ್ ರಾಷ್ಟ್ರಗಳು ಹಲಾಲ್ ಮಾಂಸವನ್ನು ಮಾತ್ರ ಆಮದು ಮಾಡಿಕೊಳ್ಳುತ್ತವೆ. ಹಲಾಲ್ ಬಳಕೆಯು ರಫ್ತುದಾರರಿಗೆ ಹಲಾಲ್ ಮಾಂಸವನ್ನು ಮಾತ್ರ ಖರೀದಿಸುವುದನ್ನು ಕಡ್ಡಾಯಗೊಳಿಸುತ್ತದೆ ಎಂಬ ಚರ್ಚೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಉಂಟಾಗಿದೆ ಎನ್ನಲಾಗಿದೆ.