ಬೆಂಗಳೂರು(04-11-2020): ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಕುಟುಂಬದ ಸದಸ್ಯರ ವಿರುದ್ಧ ದಾಖಲಾಗಿದ್ದ ಮೂರು ಪ್ರಕರಣಗಳನ್ನು ವಕೀಲ ಬಿ.ವಿನೋದ್ ವಾಪಸ್ ಪಡೆದಿದ್ದಾರೆ.
ಇಂದು ಬೆಳಿಗ್ಗೆ ದಿಢೀರ್ ಈ ಬೆಳವಣಿಗೆ ನಡೆದಿದ್ದು, ಪ್ರಕರಣವಿದ್ದ ನ್ಯಾಯಾಪೀಠದ ನ್ಯಾಯಮೂರ್ತಿ ಜಾನ್ ಮೈಖೆಲ್ ಕುನ್ಹಾ ಅವರ ಮುಂದೆ ಹಾಜರಾಗಿ ವಿನೋದ್ ಮೂರು ಪ್ರಕರಣಗಳನ್ನು ವಾಪಸ್ ಪಡೆದಿದ್ದಾರೆ.
ಶಿವಮೊಗ್ಗ ಮೂಲದ ವಕೀಲ ಬಿ.ವಿನೋದ್ ಎನ್ನುವವರು ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ಮೂರು ಕೇಸ್ಗಳು ಸಿಎಂ ಯಡಿಯೂರಪ್ಪ ಕುಟುಂಬದ ಸದಸ್ಯರ ವಿರುದ್ಧ ದಾಖಲು ಮಾಡಿದ್ದರು.