ನೋಯ್ಡಾ(02-11-2020): ಪತಿಯನ್ನು ಉಸಿರುಗಟ್ಟಿಸಿ ಪತ್ನಿ ಮತ್ತು ಅಪ್ರಾಪ್ತ ಮಕ್ಕಳು ಕೊಲೆ ಮಾಡಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ.
ಮೊರಾನಾ ಪ್ರದೇಶದ ಸ್ಲಂ ನಿವಾಸಿ ಅನಿಲ್ ಕುಮಾರ್ ಎಂಬಾತನನ್ನು ಆತನ ಪತ್ನಿ ಮತ್ತು ಅಪ್ರಾಪ್ತ ಮಕ್ಕಳು ಸೇರಿ ಕೊಲೆ ಮಾಡಿದ್ದಾರೆ. ಅನಿಲ್ ಕುಮಾರ್ ವಿಪರೀತ ಕುಡಿತದ ಚಟವನ್ನು ಹೊಂದಿದ್ದ. ಇದರಿಂದಾಗಿ ಹೆಂಡತಿ ಮಕ್ಕಳು ಈ ಕೃತ್ಯವನ್ನು ನಡೆಸಿದ್ದಾರೆ ಎನ್ನಲಾಗಿದೆ.
ಪೊಲೀಸ್ ಅಧಿಕಾರಿ ರಾಜೇಶ್.ಎಸ್ ಕೊಲೆಯನ್ನು ದೃಢಪಡಿಸಿದ್ದಾರೆ. ಈತನ ಮೃತದೇಹ ಪಾರ್ಕ್ ವೊಂದರಲ್ಲಿ ಸಿಕ್ಕಿದೆ ಎಂದು ಹೇಳಿದ್ದ. ಮೊದಲು ಈತ ಕುಡಿದು ಬಿದ್ದು ಮೃತಪಟ್ಟಿದ್ದ ಎಂದು ಹೇಳಲಾಗಿತ್ತು. ಆ ಬಳಿಕ ತನಿಖೆಯಲ್ಲಿ ಕೊಲೆ ಬಹಿರಂಗವಾಗಿದೆ. ಮಹಿಳೆಯನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಮಕ್ಕಳನ್ನು ಬಾಲಾಪರಾಧಿ ಜೈಲಿಗೆ ವರ್ಗಾಯಿಸಲಾಗಿದೆ.