ನವದೆಹಲಿ(07-10-2020): ಭಾರತದಲ್ಲಿ ಹಿಂದುಳಿದ ವರ್ಗಗಳ ವಿರುದ್ಧ ಹೆಚ್ಚುತ್ತಿರುವ ಲೈಂಗಿಕ ಹಿಂಸಾಚಾರದ ಬಗೆಗೆ ವಿಶ್ವಸಂಸ್ಥೆಯು ಆತಂಕ ವ್ಯಕ್ತಪಡಿಸಿದೆ.
ಹಿಂದುಳಿದ ವರ್ಗಗಳು ಮುಂದೆಯೂ ಇಂತಹ ಲೈಂಗಿಕ ಹಿಂಸಾಚಾರಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಾಗಿದೆಯೆಂದೂ, ಹತ್ರಾಸ್ ಮತ್ತು ಬಲರಾಮ್ ಪುರ ಘಟನೆಗಳು ಇದನ್ನೇ ಸೂಚಿಸುತ್ತವೆಯೆಂದೂ ವಿಶ್ವಸಂಸ್ಥೆ ಹೇಳಿದೆ.
ಭಾರತದಲ್ಲಿನ ಸ್ತ್ರೀಯರು ಮತ್ತು ಬಾಲಕಿಯರ ಮೇಲೆ ನಡೆಯುತ್ತಿರುವ ಲೈಂಗಿಕ ಹಿಂಸಾಚಾರಗಳ ವಿರುದ್ಧ ಧ್ವನಿಯೆತ್ತಿದ ವಿಶ್ವಸಂಸ್ಥೆಯು, ಲೈಂಗಿಕ ಹಿಂಸಾಚಾರದತ್ತ ಕೊಂಡೊಯ್ಯುವ ಸಾಮಾಜಿಕ ರೀತಿನೀತಿಗಳನ್ನು ಹಾಗೂ ಪುರುಷರು ಮತ್ತು ಬಾಲಕರ ಅನುಚಿತ ವರ್ತನೆಗಳನ್ನು ವಿರೋಧಿಸಬೇಕಿದೆ ಎಂದಿದೆ. ಆದಷ್ಟು ಬೇಗ ವಿಚಾರಣೆ ಮುಗಿಸಿ, ಅಪರಾಧಿಗಳಿಗೆ ಶಿಕ್ಷೆ ವಿಧಿಸಬೇಕೆಂದು ಅದು ಆಗ್ರಹಿಸಿದೆ.