ಎಲ್ಲೂರು(10-12-2020): ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲಾ ಕೇಂದ್ರವಾದ ಎಲ್ಲೂರಿನಲ್ಲಿ ನಿಗೂಢ ಕಾಯಿಲೆ ಇದೀಗ ವಿಶ್ವ ಆರೋಗ್ಯ ಸಂಸ್ಥೆಯ ಗಮನಕ್ಕೆ ಬಂದಿದ್ದು, ಇಬ್ಬರು ಸದಸ್ಯರ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ತಂಡ ತನಿಖೆಗೆ ಎಲ್ಲೂರಿಗೆ ತಲುಪಿದೆ.
ನಿಗೂಢ ಕಾಯಿಲೆಗೆ ಅನಾರೋಗ್ಯಕ್ಕೆ ಒಳಗಾದವರ ಸಂಖ್ಯೆ 593 ಕ್ಕೆ ತಲುಪಿದೆ, ಆದರೆ ಸಕ್ರಿಯ ಪ್ರಕರಣಗಳು ಬುಧವಾರ ಸಂಜೆ 46 ಕ್ಕೆ ಇಳಿದಿವೆ.
ರೋಗಿಗಳಿಗೆ ಮೂರರಿಂದ ಐದು ನಿಮಿಷಗಳ ಅಪಸ್ಮಾರ, ಮರೆವು, ಆತಂಕ, ವಾಂತಿ, ತಲೆನೋವು ಮತ್ತು ಬೆನ್ನು ನೋವುಗಳು ಕಾಣಿಸಿಕೊಂಡಿದೆ. ಈಗಾಗಲೇ ಓರ್ವ ವ್ಯಕ್ತಿ ರೋಗಕ್ಕೆ ಬಲಿಯಾಗಿದ್ದಾರೆ.
ವಿಜಯವಾಡದಿಂದ ಈಶಾನ್ಯಕ್ಕೆ 58 ಕಿ.ಮೀ ದೂರದಲ್ಲಿರುವ ಎಲ್ಲೂರು ಕರಾವಳಿ ಭತ್ತದ ಕೃಷಿ ಮತ್ತು ಜಲಚರ ಸಾಕಣೆ ಕೇಂದ್ರವಾಗಿದೆ. ಈ ಪ್ರದೇಶಗಳಲ್ಲಿ ಇಲ್ಲಿಯವರೆಗೆ 22 ನೀರಿನ ಮಾದರಿಗಳನ್ನು ಪರೀಕ್ಷಿಸಲಾಗಿದೆ. ರಕ್ತದ ಮಾದರಿಗಳನ್ನು ಕೂಡ ಪರೀಕ್ಷೆ ನಡೆಸಲಾಗಿದೆ.