ಕೋಲ್ಕತಾ: ನಂದಿಗ್ರಾಮದಲ್ಲಿ ಬಲಗಾಲು, ಎಡ ಭುಜ, ಅಂಗೈ ಹಾಗೂ ಕುತ್ತಿಗೆಗೆ ಗಾಯವಾದ ಬಳಿಕ ಕೋಲ್ಕತಾದ ಎಸ್ ಎಸ್ ಕೆಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾದ ಎರಡು ದಿನಗಳ ಬಳಿಕ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ವೀಲ್ಡ್ ಚೇರ್ ನಲ್ಲೇ ಕೋಲ್ಕತಾದ ಗಾಂಧಿ ಮೂರ್ತಿಯಿಂದ ಹಝ್ರಾದ ತನಕ ರೋಡ್ ಶೋ ಆರಂಭಿಸಿದ್ದಾರೆ.
ಮಮತಾ ಅವರು ಕೋಲ್ಕತಾದ ಗಾಂಧಿ ಮೂರ್ತಿ ಬಳಿ ಆಗಮಿಸುವ ಮೊದಲೇ ನೂರಾರು ಟಿಎಂಸಿ ನಾಯಕರು ಹಾಗೂ ಬೆಂಬಲಿಗರು ಅಲ್ಲಿ ಜಮಾಯಿಸಿದ್ದರು.
ಮಮತಾ ಅವರು ಕಳೆದ ವಾರ ತಮ್ಮ ಸ್ಪರ್ಧೆಯ ಕ್ಷೇತ್ರ ನಂದಿಗ್ರಾಮಕ್ಕೆ ಭೇಟಿ ನೀಡಿದಾಗ ಅವರ ಮೇಲೆ ದಾಳಿ ನಡೆದಿರುವುದ್ದಕ್ಕೆ ಯಾವುದೆ ಪುರಾವೆ ಇಲ್ಲ. ಇದೊಂದು ಆಕಸ್ಮಿಕ ಘಟನೆ ಎಂದು ಚುನಾವಣಾ ಆಯೋಗವು ಚುನಾವಣಾ ವೀಕ್ಷಕರ ವರದಿಯನ್ನು ಆಧರಿಸಿ ತಿಳಿಸಿದೆ.
ಮಮತಾ ಅವರ ಆರೋಗ್ಯ ವಿಚಾರವು ಬಂಗಾಳದ ರಾಜಕೀಯ ವಲಯದಲ್ಲಿ ಈಗ ಭಾರಿ ಚರ್ಚೆಯ ವಿಷಯವಾಗಿದೆ.