ಇನ್ನು ಮುಂದೆ ವಾಟ್ಸಪ್ ಬಳಕೆಗೂ ಶುಲ್ಕ ಬೀಳಲಿದೆ | ಆದರೆ ಎಲ್ಲರಿಗೂ ಅಲ್ಲ…

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕ್ಯಾಲಿಫೋರ್ನಿಯಾ(27-10-2020): ಸಣ್ಣ ಅವಧಿಯಲ್ಲಿ ಜಗತ್ತಿನಾದ್ಯಂತ ದೊಡ್ಡ ಪ್ರಮಾಣದ ಬಳಕೆದಾರರನ್ನು ವಾಟ್ಸಪ್  ಸಂಪಾದಿಸಿಕೊಂಡಿದೆ . ಭಾರತದಂತಹ ದೇಶಗಳಲ್ಲಿ ಯಾವುದೇ ಶುಲ್ಕವಿಲ್ಲದೇ ಬೇಕಾಬಿಟ್ಟಿ ಬಳಕೆಯಾಗುತ್ತಿದೆ. ಆದರೆ ಇನ್ನು ಮುಂದೆ “ವಾಟ್ಸಪ್ ಬ್ಯುಸಿನೆಸ್” ಫ್ಯೂಚರು ಇರುವ ಬಳಕೆದಾರರಿಗೆ ಶುಲ್ಕ ಬೀಳಲಿದೆಯೆಂದು ವಾಟ್ಸಪ್ ಕಂಪನಿಯು ತಿಳಿಸಿದೆ.

‘ವಾಟ್ಸಪ್ ಬ್ಯುಸಿನೆಸ್’ ಎನ್ನುವುದು ಆನ್ಲೈನ್ ವ್ಯಾಪಾರ ಮಾಡುವವರಿಗೆ ತುಂಬಾ ಸಹಕಾರಿಯಾಗಿದೆ. ಇನ್ನು ಮುಂದೆ ಇದರಲ್ಲಿ ಮಾರಾಟ ಮಾಡಲಾಗುವ ವಸ್ತುಗಳು ವಿವರಗಳು, ಬೆಲೆ ಮತ್ತು ಅವುಗಳ ಬಗೆಗಿನ ಆಡಿಯೋ, ವೀಡಿಯೋಗಳು ದೊರಕುವಂತೆ ವಿನ್ಯಾಸ ಮಾಡಲಿದೆ. ಸಣ್ಣ ವ್ಯಾಪಾರಿಗಳಿಗೆ ಇದು ಸುಲಭ ವೇದಿಕೆಯನ್ನೊದಗಿಸುತ್ತದೆ.

‘ವಾಟ್ಸಪ್ ಬ್ಯುಸಿನೆಸ್’ ಬಳಸುವವರಿಗೆ ಎಷ್ಟು ಮೊತ್ತದ ಶುಲ್ಕ ಹಾಕುತ್ತದೆಯೆಂದು ಕಂಪೆನಿ ಈ ವರೆಗೂ ಬಹಿರಂಗ ಪಡಿಸಿಲ್ಲ. ಹೊಸ ಫ್ಯೂಚರುಗಳನ್ನು ವಿನ್ಯಾಸಗೊಳಿಸುವ ಕೆಲಸ ಪ್ರಗತಿಯಲ್ಲಿದೆ ಎಂದಿದೆ. ಅದರಲ್ಲಿ pay-to-message ಕೂಡಾ ಒಂದು. ವಾಟ್ಸಪ್ ಬ್ಯುಸಿನೆಸ್ ಅಲ್ಲದ ಸಾಮಾನ್ಯ ರೀತಿಯ ವಾಟ್ಸಪ್ ಬಳಕೆದಾರರಿಗೆ ಮೊದಲಿನಂತೆಯೇ ಉಚಿತ ಸೇವೆ ದೊರೆಯುವುದು.

ವಿಶ್ವದಾದ್ಯಂತ ಎರಡು ಬಿಲಿಯನಿನಷ್ಟು ವಾಟ್ಸಪ್ ಬಳಕೆದಾರರಿದ್ದು, ಭಾರತವೊಂದರಲ್ಲೇ ಇನ್ನೂರು ಮಿಲಿಯನಿಗೂ ಅಧಿಕ ಬಳಕೆದಾರರಿದ್ದಾರೆ. ಸದ್ಯ ವಿಶ್ವಾದ್ಯಂತ ಐವತ್ತು ಮಿಲಿಯನ್ ಜನ “ವಾಟ್ಸಪ್ ಬ್ಯುಸಿನೆಸ್” ಉಪಯೋಗಿಸುತ್ತಿದ್ದಾರೆ. ಹೊಸ ಫ್ಯೂಚರುಗಳು ಸೇರಿದರೆ ಅದರ ಸಂಖ್ಯೆ ಇನ್ನಷ್ಟು ಏರಬಹುದೆಂಬ ಅಭಿಪ್ರಾಯ ವ್ಯಕ್ತವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು