ನವದೆಹಲಿ:ನಿಯಮಿತವಾಗಿ ಹೊಸ ಫೀಚರ್ ಗಳನ್ನು ಬಿಡುಗಡೆ ಮಾಡುವೆ ವಾಟ್ಸ್ಆ್ಯಪ್ ಸಂಸ್ಥೆಯೂ ಶೀಘ್ರದಲ್ಲಿಯೇ ವಾಟ್ಸಾಪ್ ಗ್ರೂಪ್ ಅಡ್ಮಿನ್ ಗಳು ಗ್ರೂಪ್ ನಲ್ಲಿ ಬರುವ ಮೆಸೇಜ್ ಗಳನ್ನು ಡಿಲೀಟ್ (ಡಿಲೀಟ್ ಫಾರ್ ಎವರಿವನ್)ವಿಶೇಷಾಧಿಕಾರ ಹೊಂದುವ ಫೀಚರ್ ಬಿಡುಗಡೆ ಮಾಡಲಿದೆ.
ಗ್ರೂಪ್ ನ ಆಶ್ರಯಗಳಿಗೆ ವಿರುದ್ಧವಾಗಿ ಸಂದೇಶಗಳು, ಫೋಟೋ, ವಿಡಿಯೋಗಳನ್ನು ಯಾರಿಗೂ ಕಾಣದ ಹಾಗೆ ಡಿಲೀಟ್ ಮಾಡಬಹುದಾಗಿದ್ದು, ಅಡ್ಮಿನ್ ಮಾತ್ರ ಈ ಅಧಿಕಾರವನ್ನು ಹೊಂದುತ್ತಾರೆ. ಅಲ್ಲದೇ ಬಳಕೆದಾರರು ಯಾರಿಗಾದರೂ ಕಳುಹಿಸಿದ ಮೆಸೇಜನ್ನು ಡಿಲೀಟ್ ಮಾಡುವ ಅವಧಿಯನ್ನು ಒಂದು ವಾರದ ವರೆಗೆ ವಿಸ್ತರಿಸಲು ಸಂಸ್ಥೆ ನಿರ್ಧರಿಸಿವೆ.
