ಭಾರತದ ಪ್ರಜೆಯನ್ನು ಯಾವುದೇ ರಾಜ್ಯದಲ್ಲಿ ‘ಪರಕೀಯ’ ಎಂದು ನೋಡಬಾರದು| ರಾಜ್ಯಪಾಲರ ಹೇಳಿಕೆ ಬಿಜೆಪಿ ಆಡಳಿತದ ರಾಜ್ಯಕ್ಕೂ ಅನ್ವಯವಾಗಲಿ!

governr
Share on facebook
Share on twitter
Share on linkedin
Share on whatsapp
Share on telegram
Share on email
Share on print

ಪಶ್ಚಿಮ ಬಂಗಾಳ(06-01-2021): ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್​ ಧನ್​ಕರ್ ಮಹತ್ವದ ಹೇಳಿಕೆಯೊಂದರಲ್ಲಿ ಭಾರತದ ಯಾವುದೇ ಪ್ರಜೆಯನ್ನು ಯಾವುದೇ ರಾಜ್ಯದಲ್ಲಿ ‘ಪರಕೀಯ’ ಎಂದು ನೋಡುವುದು ಸಂವಿಧಾನದ ಆಶಯಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಕೋಲಾಘಾಟ್​ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳದ ಕೆಲವರು ಹೊರ ರಾಜ್ಯಗಳಿಂದ ಬರುವವರನ್ನು ಪರಕೀಯರು ಎಂದು ಕರೆದಿದ್ದಾರೆ. ದೇಶದ ಯಾವುದೇ ಮೂಲೆಯಲ್ಲಿದ್ದರೂ ಅವರು ಈ ದೇಶದವರೇ ಆಗಿರುತ್ತಾರೆಯೇ ಹೊರತು ಹೊರಗಿನವರಾಗುವುದಿಲ್ಲ. ಒಂದುವೇಳೆ ಹಾಗೆ ಕರೆದರೆ ಅದು ಸಂವಿಧಾನದ ಆಶಯವನ್ನೇ ಬುಡಮೇಲು ಮಾಡಿದಂತೆ ಎಂದು ಹೇಳಿದ್ದಾರೆ.

ಪ.ಬಂಗಾಳದಲ್ಲಿ  ರಾಜ್ಯಪಾಲ ಜಗದೀಪ್​ ಧನ್​ಕರ್ ಹೇಳಿಕೆ ಟಿಎಂಸಿ ಆಡಳಿತ ರಾಜ್ಯದಲ್ಲಿ ಇದ್ದ ಕಾರಣ ಬಂದಿದೆಯಾ ಎಂಬ ಪ್ರಶ್ನೆ ಮೂಡಿದೆ. ಯಾಕೆಂದರೆ ಬಿಜೆಪಿ ಆಡಳಿತದ ಹಲವು ರಾಜ್ಯಗಳಲ್ಲಿ ಮುಸ್ಲಿಮರನ್ನು ಮತ್ತು ದಲಿತರನ್ನು ದ್ವಿತೀಯ ದರ್ಜೆಯ ಪ್ರಜೆಗಳಾಗಿ ಉಪಚರಿಸುತ್ತಿರುವುದು ಕಂಡುಬರುತ್ತಿದೆ. ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಹೋಗಿ ಎಂದು ನಿಂದಿಸಲಾಗುತ್ತಿದೆ. ಮುಸ್ಲಿಮರ ದೇಶಪ್ರೇಮವನ್ನು ಪ್ರಶ್ನಿಸಲಾಗುತ್ತಿದೆ. ಈ ಮಧ್ಯೆ ರಾಜ್ಯಪಾಲರು ಹೇಳಿಕೆ ಸರಿಯಾಗಿಯೇ ಇದೆ. ಇದು ದೇಶದ ಎಲ್ಲಾ ರಾಜ್ಯಗಳಿಗೆ ಅದರಲ್ಲೂ ಬಿಜೆಪಿ ಆಡಳಿತದ ರಾಜ್ಯಕ್ಕೂ ಅನ್ವಯಿಸಬೇಕಿದೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು