ನನ್ನದೇ ಗೆಲುವು, ಮತ ಎಣಿಕೆ ನಿಲ್ಲಿಸಿ ಎಂದ ಟ್ರಂಪ್| ಗೆಲುವಿನತ್ತ ಬಿಡೆನ್

trump
Share on facebook
Share on twitter
Share on linkedin
Share on whatsapp
Share on telegram
Share on email
Share on print

ಅಮೆರಿಕಾ(04-11-2020): ವಿವಿಧ ರಾಜ್ಯಗಳಲ್ಲಿ ಲಕ್ಷಾಂತರ ಮತಗಳ ಎಣಿಕೆ ಬಾಕಿ ಇದ್ದರೂ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾನೇ  ವಿಜಯಿ  ಎಂದು ಘೋಷಿಸಿದ್ದು, ಶ್ವೇತಭವನದ ಭಾಷಣದಲ್ಲಿ ಅವರು ‘ಎಲ್ಲಾ ಮತದಾನವನ್ನು ನಿಲ್ಲಿಸಲು’ ಕೇಳಲು ಸುಪ್ರೀಂ ಕೋರ್ಟ್ಗೆ ಹೋಗುವುದಾಗಿ ಹೇಳಿದ್ದಾರೆ.

ನಾನು, ನಾವು ಈ ಚುನಾವಣೆಯಲ್ಲಿ ಗೆದ್ದಿದ್ದೇವೆ, ಎಂದು ಟ್ರಂಪ್ ಹೇಳಿದರು, ಹೇಳಿಕೆ ನೀಡುವಾಗ ಅವರು ಗೆಲ್ಲಲು ಬೇಕಾದ 270 ಮತಗಳ ಸಮೀಪ ಇರಲಿಲ್ಲ.

ಟ್ರಂಪ್ 213 ಮತ ಪಡೆದಿದ್ದು, ಜೋ ಬಿಡೆನ್ 225 ಮತವನ್ನು ಪಡೆದಿದ್ದರು. ಟ್ರಂಪ್ ಈ ಮೊದಲು ಚುನಾವಣಾ ಫಲಿತಾಂಶದ ಬೆನ್ನಲ್ಲೇ ಹಿಂಸಾಚಾರ ನಡೆಯುತ್ತದೆ ಎಂದು ಹೇಳಿದ್ದರು. ಇದೀಗ ಚುನಾಣಾ ಮತ ಎಣಿಕಾಯಾಗದಿದ್ದರೂ ನಾನೇ ವಿನ್ ಎಣಿಕೆ ನಿಲ್ಲಿಸಿ ಎಂದು ಟ್ರಂಪ್ ಹೇಳುತ್ತಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು