ಇಸ್ಲಾಂಗೆ ಮತಾಂತರವಾಗುವಂತೆ ಖ್ಯಾತ ಸಂಗೀತ ನಿರ್ದೇಶಕನ ಪತ್ನಿಗೆ ಕಿರುಕುಳ!

wazid khan
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮುಂಬಯಿ(30-11-2020): ನನಗೂ ಬಲವಂತದ ಮತಾಂತರಕ್ಕೆ ಕಿರುಕುಳವನ್ನು ನೀಡಲಾಗಿದೆ ಎಂದು ಇತ್ತೀಚೆಗೆ ಮೃತಪಟ್ಟ ಖ್ಯಾತ ಸಂಗೀತ ನಿರ್ದೇಶಕ ವಾಜೀದ್ ಖಾನ್‌ ಪತ್ನಿ ಹೇಳಿದ್ದಾರೆ.

ಬಲವಂತದ ಮತಾಂತರದ ಚರ್ಚೆ, ಯುಪಿ ಸರಕಾರದ ಸುಗ್ರಿವಾಜ್ಞೆ ಬೆನ್ನಲ್ಲೇ ವಾಜೀದ್ ಖಾನ್ ಪತ್ನಿ ಕಮಲ್ರುಖ್ ಖಾನ್ ಟ್ವೀಟ್ ಮಾಡಿದ್ದಾರೆ.

ಕಮಲ್ರುಖ್ ಪಾರ್ಸಿ ಧರ್ಮದವಳಾಗಿದ್ದು, ವಾಜಿದ್ ಮುಸ್ಲಿಂ ಧರ್ಮಕ್ಕೆ ಸೇರಿದವರಾಗಿದ್ದರು. ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳದ ಕಾರಣ ನನಗೆ ವಾಜೀದ್ ಖಾನ್‌ ಕುಟುಂಬಸ್ಥರು  ಕಿರುಕುಳ ನೀಡಿದ್ದಾರೆ. ವಾಜಿದ್‌ನನ್ನು 10 ವರ್ಷ ಪ್ರೀತಿಸಿ, ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಿದ್ದೆ. ನಮ್ಮ ಸಂಸಾರದ ಬಿರುಕಿಗೆ ಇದೇ ಕಾರಣ ಎಂದು ಹೇಳಿದ್ದಾರೆ.

ವಾಜಿದ್‌ ಒಬ್ಬ ಅದ್ಭುತ ಟ್ಯಾಲೆಂಟ್‌ ಹೊಂದಿದ ವ್ಯಕ್ತಿ. ನಾನು, ನನ್ನ ಮಕ್ಕಳು ಅವನನ್ನು ಈಗಲೂ ಮಿಸ್‌ ಮಾಡಿಕೊಳ್ಳುತ್ತಿದ್ದೇವೆ  ಎಂದು ದುಃಖ ತೋಡಿಕೊಂಡಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು