ಅರ್ಮೇನಿಯಾ ಅಸರ್ಬೈಜಾನ್ ನಡುವೆ ಯುದ್ಧ ವಿರಾಮ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಾಸ್ಕೋ (11/10/2020): ಕಳೆದೆರಡು ವಾರದಿಂದ ಅಕ್ಕಪಕ್ಕದ ಅರ್ಮೇನಿಯಾ ಮತ್ತು ಅಸರ್ಬೈಜಾನ್ ದೇಶಗಳ ನಡುವೆ ಯುದ್ಧ ನಡೆಯುತ್ತಿತ್ತು. ಇದೀಗ ಅವೆರಡರ ನಡುವೆ ಯುದ್ಧ ವಿರಾಮ ಘೋಷಣೆಯಾಗಿದೆ.

ರಷ್ಯಾದಲ್ಲಿ ಎರಡೂ ದೇಶಗಳ ನಡುವೆ ನಡೆದ ಮಾತುಕತೆಯು ಈ ಫಲಿತಾಂಶಕ್ಕೆ ಕಾರಣವಾಗಿದೆ. ರಷ್ಯಾದ ವಿದೇಶಾಂಗ ಸಚಿವ ಸರ್ಗೇಯ್ ಲವ್ರೋವ್ ಈ ವಿಷಯವನ್ನು ಬಹಿರಂಗ ಪಡಿಸಿದರು. ಅಂತರಾಷ್ಟ್ರೀಯ ಸಂಘಟನೆ ರಟ್ರೋಸ್ ಶಾಂತಿ ಪ್ರಕ್ರಿಯೆಯಲ್ಲಿ ಮಧ್ಯಸ್ಥಿಕೆ ವಹಿಸಲಿದೆಯೆಂದು ಮಾಸ್ಕೋದಲ್ಲಿ ಅವರು ಹೇಳಿದರು.

ಮಾತುಕತೆಯಲ್ಲಿ ಸೆರೆಯಾಳುಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು, ಮೃತದೇಹಗಳನ್ನು ತಂದು ಅಂತ್ಯಸಂಸ್ಕಾರ ನಡೆಸುವುದು ಇತ್ಯಾದಿ ತೀರ್ಮಾನಗಳನ್ನು ಕೈಗೊಳ್ಳಲಾಯಿತು.

ಅಸರ್ಬೈಜಾನಿನಲ್ಲಿರುವ ಅರ್ಮೇನಿಯನ್ ಬಹುಸಂಖ್ಯಾತರಿರುವ ಗಡಿ ಪ್ರದೇಶವಾದ ನಗೋರ್ನೊ-ಕರಾಬಾಕ್ ವಿಚಾರದಲ್ಲಿ ಎರಡೂ ದೇಶಗಳ ಮಧ್ಯೆ ಮತ್ತೆ  ಸಂಘರ್ಷ ಉಂಟಾಗಿ ಇದುವರೆಗೆ ನಾನೂರಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿತ್ತು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು