ಮಂಗಳೂರು: ವಿವಾದಾತ್ಮಕ ಗೋಡೆ ಬರಹ ಪ್ರಕರಣ; ಮುಸ್ಲಿಂ ಯುವಕನ ಬಂಧನ

wall writing
Share on facebook
Share on twitter
Share on linkedin
Share on whatsapp
Share on telegram
Share on email
Share on print

ಮಂಗಳೂರು(03-12-2020):ಮಂಗಳೂರಿನಲ್ಲಿ ಉಗ್ರರ ಪರ ಗೋಡೆ ಬರಹ ಬರೆದಿದ್ದ ಪ್ರಕರಣಕ್ಕೆ ಸಂಬಂಧಿಸಿ ಯುವಕನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ತೀರ್ಥಹಳ್ಳಿ ಮೂಲದ ನಜೀರ್ ಮುಹಮ್ಮದ್‌ ಎಂಬ ಯುವಕನನ್ನು ಕದ್ರಿ ಪೊಲೀಸರು ಬಂಧಿಸಿ ವಿಚಾರಣೆಯನ್ನು ನಡೆಸುತ್ತಿದ್ದಾರೆ.

 ಮಂಗಳೂರಿನ ಬಿಜೈ ಅಪಾರ್ಟ್ ಮೆಂಟ್ ನಲ್ಲಿ ಮತ್ತು ಕೋರ್ಟ್ ಸಮೀಪದ ಗೋಡೆಯಲ್ಲಿ ಇತ್ತೀಚೆಗೆ ಲಷ್ಕರ್ ಉಗ್ರರನ್ನು ಬೆಂಬಲಿಸಿ ಮತ್ತು ಪ್ರವಾದಿಯನ್ನು ಉಲ್ಲೇಖಿಸಿ ಗೋಡೆ ಬರಹ ಪತ್ತೆಯಾಗಿತ್ತು. ಈ ಬಗ್ಗೆ ಕರಾವಳಿಯಲ್ಲಿ ಆತಂಕ ಮತ್ತು ರಾಜಕೀಯ ಚರ್ಚೆಗೆ ಕೂಡ ಗ್ರಾಸವಾಗಿತ್ತು.  ಇದೀಗ ಕೇಸ್ ಗೆ ಸಂಬಂಧಿಸಿದಂತೆ ಓರ್ವ ಯುವಕನ ಬಂಧನವಾಗಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು