ಮಂಗಳೂರು(29-11-2020): ಮಂಗಳೂರಿನಲ್ಲಿ ಗೋಡೆ ಬರಹದ ಸರದಿ ಮುಂದುವರಿದಿದ್ದು, ಜನರು ಆತಂಕಿತರಾಗಿದ್ದಾರೆ.
ಎರಡು ದಿನಗಳ ಮೊದಲು ಮಂಗಳೂರಿನ ಅಪಾರ್ಟ್ ಮೆಂಟ್ ಗೋಡೆ ಮುಂದೆ ಲಷ್ಕರ್ ಉಗ್ರರನ್ನು ಬೆಂಬಲಿಸಿ ವಿವಾದಾತ್ಮಕ ಬರಹವನ್ನು ಬರೆಯಲಾಗಿತ್ತು. ಈ ಬಗ್ಗೆ ಪೊಲಿಸರು ತನಿಖೆ ನಡೆಸಿದ್ದರು. ಆದರೆ ಆರೋಪಿಯನ್ನು ಪತ್ತೆಮಾಡಿಲ್ಲ.
ಇದೀಗ ನಗರದ ಕೋರ್ಟ್ ರಸ್ತೆಯಲ್ಲಿ ಉರ್ದು ಭಾಷೆಯಲ್ಲಿ ಗೋಡೆಯೊಂದರ ಮೇಲೆ ಪ್ರವಾದಿಗಳು ಕೋಪಗೊಂಡರೇ ಒಂದೇ ಶಿಕ್ಷೆ, ತಲೆ ದೇಹದಿಂದ ಬೇರ್ಪಡುವುದು ಎಂದು ಬರೆಯಲಾಗಿದೆ.