ವ್ಯರ್ಥವಾಗಿ ಹೋದ ಲಕ್ಷಾಂತರ ಡೋಸ್ ಲಸಿಕೆಗಳು | ಮಾಹಿತಿ ಹಕ್ಕು ಕಾಯ್ದೆಯಡಿ ಬಹಿರಂಗ

Share on facebook
Share on twitter
Share on linkedin
Share on whatsapp
Share on telegram
Share on email
Share on print

ನವದೆಹಲಿ: ಕೋವಿಡ್ ಮಹಾಮಾರಿಯು ವ್ಯಾಪಕವಾಗುತ್ತಿದ್ದಂತೆಯೇ ದೇಶಾದ್ಯಂತ ಲಸಿಕೆಯ ಕೊರತೆ ಕಾಡುತ್ತಿದೆ. ಈ ನಡುವೆ ಲಕ್ಷಾಂತರ ಲಸಿಕೆಗಳು ವ್ಯರ್ಥವಾಗಿ ಹೋಗಿರುವುದು ವರದಿಯಾಗಿದೆ.

ಎಪ್ರಿಲ್ 11 ವರೆಗೆ 10 ಕೋಟಿ ಡೋಸು‌ಗಳನ್ನು ಕೇಂದ್ರ ಸರಕಾರವು ರಾಜ್ಯಗಳಿಗೆ ನೀಡಿದೆ. ಅದರಲ್ಲಿ ಬರೋಬ್ಬರಿ 44 ಲಕ್ಷ ಡೋಸುಗಳು‌ ವ್ಯರ್ಥವಾಗಿ ಹೋಗಿದೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬಹಿರಂಗವಾಗಿದೆ.

ಕೋವಿಡ್ ಲಸಿಕೆಯ ಸೀಸದಲ್ಲಿ ಹತ್ತು ಡೋಸು ಲಸಿಕೆಗೆ ಅಗತ್ಯವಾದಷ್ಟು ದ್ರವ್ಯವು ತುಂಬಿದೆ. ಒಮ್ಮೆ ಸೀಸವನ್ನು ತೆರೆದರೆ, ಹತ್ತು ಮಂದಿಗೆ ನೀಡಬೇಕಾಗುತ್ತದೆ. ನಿರ್ದಿಷ್ಠ ಸಮಯ ಮಿತಿಯೊಳಗೆ ಹತ್ತು ಮಂದಿ ಭರ್ತಿಯಾಗದಿದ್ದರೆ, ಅಷ್ಟೂ ಪ್ರಮಾಣದ ಲಸಿಕೆ ವ್ಯರ್ಥವಾಗಿ ಹೋಗುವುದು.

ಲಸಿಕೆಯನ್ನು ವ್ಯರ್ಥ ಮಾಡುವುದರಲ್ಲಿ ತಮಿಳುನಾಡು ರಾಜ್ಯವು ಪ್ರಥಮ ಸ್ಥಾನದಲ್ಲಿದ್ದು, ಅದು ಶೇಕಡಾ 12.10 ರಷ್ಟು ಲಸಿಕೆಯನ್ನು ವ್ಯರ್ಥಗೊಳಿಸಿದೆ.  ಹರ್ಯಾಣದಲ್ಲಿ ಶೇ. 9.74, ಪಂಜಾಬಿನಲ್ಲಿ‌ ಶೇ. 8.12, ಮಣಿಪುರದಲ್ಲಿ ಶೇ. 7.80 ಮತ್ತು ತೆಲಂಗಾಣದಲ್ಲಿ ಶೇ. 7.55 ಲಸಿಕೆಗಳು ವ್ಯರ್ಥಗೊಂಡಿದೆ.

ಅದೇ ವೇಳೆ ಕೇರಳ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ಮಿಜೋರಂ, ಗೋವಾ, ದಿಯುದಮನ್‌, ಅಂಡಮಾನ್‌ನಿಕೋಬಾರ್‌ ಮತ್ತು ಲಕ್ಷದ್ವೀಪಗಳಲ್ಲಿ ಲಸಿಕೆಗಳು ವ್ಯರ್ಥವಾಗಿರುವ ಬಗ್ಗೆ ವರದಿಯಾಗಿರುವುದಿಲ್ಲ.

ಲಸಿಕೆ ವ್ಯರ್ಥವಾಗುವುದನ್ನು ತಡೆಯಲು ವಯಸ್ಸಿನ ಕುರಿತಾಗಿನ ನಿಯಮಗಳನ್ನು ನೋಡದೇ, ಸಮಯ ಮಿತಿಯೊಳಗೆ ಯಾರಿಗೆಲ್ಲಾ ನೀಡಲು ಸಾಧ್ಯವಿದೆಯೋ ಅವರಿಗೆಲ್ಲಾ ನೀಡಿ ಎಂದು ದೆಹಲಿ ಉಚ್ಛ ನ್ಯಾಯಾಲಯವು ಸಲಹೆ ನೀಡಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು