ಬೆಂಗಳೂರು(23-12-2020): ಕರ್ನಾಟಕ ವೈದ್ಯಕೀಯ ಪರಿಷತ್ತಿಗೆ ಮೇಲ್ವರ್ಗದ ಐವರು ಪುರುಷರನ್ನು ಸದಸ್ಯರನ್ನಾಗಿ ನೇಮಿಸಿ, ರಾಜ್ಯ ಸರಕಾರವು ಆದೇಶ ನೀಡಿತ್ತು. ಇದೀಗ ಆದೇಶವನ್ನು ಹಿಂಪಡೆಯುವುದಾಗಿ ರಾಜ್ಯ ಸರಕಾರವು ನ್ಯಾಯಾಲಯಕ್ಕೆ ತಿಳಿಸಿದೆ.
ಸರಕಾರದ ಆದೇಶವನ್ನು, ಖ್ಯಾತ ಆರೋಗ್ಯ ತಜ್ಞರಾದ ಡಾ|| ಶ್ರೀನಿವಾಸ ಕಕ್ಕಿಲ್ಲಾಯ ಅವರು ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಪರಿಷತ್ತಿಗೆ ಚುನಾಯಿತರಾದ ಸದಸ್ಯರಲ್ಲಿ ಮಹಿಳೆಯರಿಗೆ ಮತ್ತು ಸಮಾಜದ ಇತರ ವರ್ಗದವರಿಗೆ ಪ್ರಾತಿನಿಧ್ಯ ದೊರೆಯದಿದ್ದರೆ ಸರ್ಕಾರವು ನೇಮಿಸುವಾಗ ಮಹಿಳೆಯರಿಗೂ, ಅಂಥ ವರ್ಗಗಳವರಿಗೂ ಆದ್ಯತೆ ನೀಡಬೇಕು ಎಂದು ವೈದ್ಯಕೀಯ ಪರಿಷತ್ತಿನ ಕಾಯಿದೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿರುವುದನ್ನು ಅವರು ನ್ಯಾಯಾಲಯದ ಗಮನಕ್ಕೂ ತಂದಿದ್ದರು.
ನ್ಯಾಯಾಲಯವು ಶ್ರೀನಿವಾಸ ಕಕ್ಕಿಲ್ಲಾಯ ಅವರ ವಾದವನ್ನು ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ತನ್ನ ಆಜ್ಞೆಯನ್ನು ಹಿಂಪಡೆಯುವುದಾಗಿ ನ್ಯಾಯಾಲಯಕ್ಕೆ ಇಂದು ತಿಳಿಸಿತು.
ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಹೋರಾಟಕ್ಕೆ ಮತ್ತೊಂದು ಜಯ ಸಿಕ್ಕಂತಾಗಿದೆ, ಸತ್ಯಕ್ಕಷ್ಟೇ ಗೆಲುವು ಎಂಬುದು ಮತ್ತೆ ಸಾಬೀತಾಗಿದೆ ಎಂದು ಶ್ರೀ ನಿವಾಸ ಕಕ್ಕಿಲ್ಲಾಯ ಅವರು ಹರ್ಷ ವ್ಯಕ್ತಪಡಿಸಿದ್ದಾರೆ. ಉಚ್ಛನ್ಯಾಯಲಯದಲ್ಲಿ ಕಕ್ಕಿಲ್ಲಾಯ ಪರವಾಗಿ ಶ್ರೀ ದೊರೆ ರಾಜ್ ವಾದಿಸಿದ್ದರು.