ನವದೆಹಲಿ(05-10-2020): 80 ವರ್ಷ ಮೇಲ್ಪಟ್ಟವರಿಗೆ ಮತ್ತು ಅಂಗವಿಕಲತೆಯುಳ್ಳವರಿಗೆ ಇನ್ನು ಮುಂದೆ ಅಂಚೆ ಮತಪತ್ರ ಮನೆಬಾಗಿಲಿಗೆ ಬರಲಿದೆ.
ಈ ಕುರಿತ ಮಹತ್ವದ ಹೆಜ್ಜೆಗೆ ಚುನಾವಣಾ ಆಯೋಗ ಮುಂದಾಗಿದೆ. ಅಂಚೆ ಮತಚೀಟಿಗೆ ಬೇಕಾದ ನಮೂನೆಯನ್ನು ಬೂತ್ ಮಟ್ಟದ ಅಧಿಕಾರಿ ವಿತರಿಸಲಿದ್ದಾರೆ.
ಅಂಚೆ ಮತಪತ್ರವನ್ನು ಆಯ್ಕೆ ಮಾಡಿದರೆ, BLO ಮತದಾರನ ಮನೆಯಿಂದ ಭರ್ತಿ ಮಾಡಿದ ನಮೂನೆ12-ಡಿಯನ್ನು ಐದು ದಿನಗಳ ಒಳಗಾಗಿ ಮತದಾರನ ಮನೆಯಿಂದ ಸಂಗ್ರಹಿಸಿ, ಅದನ್ನು ರಿಟರ್ನಿಂಗ್ ಆಫೀಸರ್ ಗೆ ನೀಡಬೇಕು ಎಂದು ಕೇಂದ್ರ ಚುನಾವಣಾ ಆಯೋಗವು ಅ. 3ರಂದು ಎಲ್ಲಾ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
ನಾಗರಿಕ ಸಮಾಜ ಮತ್ತು ಮಾಧ್ಯಮಗಳಿಂದ ಬಂದ ಪ್ರತಿಕ್ರಿಯೆಯನ್ನು ಆಧರಿಸಿ ಈ ಸೂಚನೆಗಳನ್ನು ಕೇಂದ್ರ ಚುನಾವಣಾ ಆಯೋಗದಿಂದ ನೀಡಲಾಗಿದೆ ಎನ್ನಲಾಗಿದೆ.