ಭೂಕುಸಿತ, ಪ್ರವಾಹಕ್ಕೆ  90 ಜನರು ಬಲಿ| 34ಮಂದಿ ನಾಪತ್ತೆ

viyatnam,
Share on facebook
Share on twitter
Share on linkedin
Share on whatsapp
Share on telegram
Share on email
Share on print

ವಿಯೆಟ್ನಾಂ(19-10-2020): ಕಳೆದ ಎರಡು ವಾರಗಳಲ್ಲಿ ವಿಯೆಟ್ನಾಂನ ಮಧ್ಯ ಪ್ರದೇಶದಲ್ಲಿ ಪ್ರವಾಹ, ಭೂಕುಸಿತ ಮತ್ತು ಇತರ ನೈಸರ್ಗಿಕ ವಿಕೋಪಗಳು ಸಂಭವಿಸಿ 90 ಜನರು ಸಾವನ್ನಪ್ಪಿದ್ದಾರೆ ಮತ್ತು 34 ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ

ಇತ್ತೀಚಿನ ವರದಿಯ ಪ್ರಕಾರ, ಮುಖ್ಯವಾಗಿ ಕ್ವಾಂಗ್ ಟ್ರೈ, ಥುವಾ ಥಿಯೆನ್ ಹ್ಯೂ ಮತ್ತು ಕ್ವಾಂಗ್ ನಾಮ್ ಪ್ರಾಂತ್ಯಗಳಲ್ಲಿ ಈ ಸಾವುನೋವುಗಳು ವರದಿಯಾಗಿವೆ.

ಸ್ಥಳೀಯ ಸಮಯ ಸೋಮವಾರ ಬೆಳಿಗ್ಗೆ 6 ಗಂಟೆಯ ಹೊತ್ತಿಗೆ, ಹಾ ಟಿನ್ಹ್, ಕ್ವಾಂಗ್ ಬಿನ್ಹ್, ಕ್ವಾಂಗ್ ಟ್ರೈ ಮತ್ತು ಥುವಾ ಥಿಯೆನ್ ಹ್ಯೂ ಪ್ರದೇಶಗಳಲ್ಲಿ 121,280 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಸುಮಾರು 1,21,700 ಮನೆಗಳು ಮುಳುಗಿವೆ ಎಂದು ಸಮಿತಿ ತಿಳಿಸಿದೆ.

ಇನ್ನು ವಿಯಾಟ್ನಂ ಕೇಂದ್ರ ಪ್ರದೇಶಗಳಲ್ಲಿ ಬುಧವಾರದವರೆಗೆ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ಕೆಲವು ಪ್ರದೇಶಗಳಲ್ಲಿ 600 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು