ಸಿದ್ದರಾಮಯ್ಯ ಲೋಕಾಯುಕ್ತವನ್ನು ಮುಚ್ಚಿ ಎಸಿಬಿಯನ್ನು  ತಂದಿದ್ದೇಕೆ? ರಾಜ್ಯದ ಜನರ ಗಮನಸೆಳೆದ ವಿಶ್ವನಾಥ್ ಗಂಭೀರ ಆಪಾದನೆ….

h. vishwanath
Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು(19-12-2020): ಮಾಜಿ ಸಿಎಂ ಸಿದ್ದರಾಮಯ್ಯಗೆ ಬಿಜೆಪಿ ಪರಿಷತ್ ಸದಸ್ಯ ವಿಶ್ವನಾಥ್ ಅರ್ಕಾವತಿ ಕೇಸ್ ನ್ನು ನೆನಪಿಸಿದ್ದು, ಕೇಸ್ ಮತ್ತೆ ತೆರೆದರೆ ಸಿದ್ದರಾಮಯ್ಯ ಎಲ್ಲಿ ಹೋಗುತ್ತಾರೆ ಎಂದು ಗೊತ್ತಿದೆ ಎಂದು ಹೇಳಿದ್ದಾರೆ.

ಮಾದ್ಯಮದ ಜೊತೆ ಮಾತನಾಡಿದ ವಿಶ್ವನಾಥ್,  ಅರ್ಕಾವತಿ ಕೇಸ್ ಮುಚ್ಚಿ ಹಾಕಲು ಲೋಕಾಯುಕ್ತವನ್ನು ಮುಚ್ಚಿ ಎಸಿಬಿಯನ್ನು ಸಿದ್ದರಾಮಯ್ಯ ತಂದಿದ್ದರು. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಯಾರು ಸೋಲಿಸಿದರು ಎನ್ನುವುದಕ್ಕಿಂತ ಯಾವ ಕಾರಣಕ್ಕೆ ಸೋಲು ಕಂಡಿದ್ದೇನೆಂದು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಟಾಂಗ್ ನೀಡಿದ್ದಾರೆ.

ಸಿದ್ದರಾಮಯ್ಯ ಕಾಂಗ್ರೆಸ್ ನ್ನು ಒಡೆದರು. ಜೊತೆಗಿದ್ದವರ ಬೆನ್ನಿಗೆ ಚೂರಿ ಇರಿದು ಸದಾ ಆನಂದ ಪಡುತ್ತಿದ್ದರು. ವಿಘ್ನ ಸಂತೋಷಿಗಳಿಗೆ ಈಗ ನೋವಾಗುತ್ತಿದೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರದ್ದು ಮಾತ್ರನಾ ರಕ್ತ, ಮಾಂಸ, ಮೂಳೆ? ನಮ್ಮದು ತಗಡು ಅಥವಾ ಮರವಾ? ನೀವು ಚೂರಿ ಹಾಕುವಾಗ ನಾವು ನೋವು ಅನುಭವಿಸಿರುವುದು ಗೊತ್ತಾ ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ.

 

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು