ವಿಷಾಹಾರ ಸೇವನೆ: ಗೋ ಶಾಲೆಯಲ್ಲಿ ಭಾರೀ ಪ್ರಮಾಣದಲ್ಲಿ ದನಗಳ ಸಾವು

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬಿದಾಸರ್(21-11-2020): ರಾಜಸ್ಥಾನದ ಗೋ ಶಾಲೆಯೊಂದರಲ್ಲಿ ಭಾರೀ ಪ್ರಮಾಣದ ದನಗಳು ಸಾವಿಗೀಡಾಗಿವೆ. ವಿಷಾಹಾರ ಸೇವನೆಯೇ ಇದಕ್ಕೆ ಕಾರಣವೆನ್ನಲಾಗಿದೆ.

ಚುರು ಜಿಲ್ಲೆಯ ರಾಮ್ ಪುರ ಗ್ರಾಮದ ಗೋಶಾಲೆಯಲ್ಲಿ ಶುಕ್ರವಾರ ರಾತ್ರಿಯಿಂದಲೇ ಒಂದೊಂದೇ ದನಗಳು ಸಾವಿಗೀಡಾಗುತ್ತಾ ಬಂದಿತ್ತು. ಈ ವರೆಗೆ ಸುಮಾರು ಎಪ್ಪತ್ತೆಂಟು ದನಗಳು ಸಾವಿಗೀಡಾಗಿವೆ. ಪರೀಕ್ಷೆ ನಡೆಸಿದ ವೈದ್ಯರು ದನಗಳು ವಿಷಯುಕ್ತ ಆಹಾರ ಸೇವಿಸಿತ್ತೆಂದು ಕಂಡುಕೊಂಡಿದ್ದಾರೆ.

ಹಲವು ದನಗಳು ಗಂಭೀರ ಸ್ಥಿತಿಯಲ್ಲಿವೆ. ಹೆಚ್ಚಿನ ಪರೀಕ್ಷೆಗೆ ಮೇವನ್ನು ಪ್ರಯೋಗಾಲಕ್ಕೆ ರವಾನಿಸಲಾಗಿದೆ. ಈ ಗೋ ಶಾಲೆಯು ಸರಕಾರೀ ಅನುದಾನದಿಂದ ಕಾರ್ಯನಿರ್ವಹಿಸುತ್ತಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು