ವಿಜಯಪುರ(30-12-2020): ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದ ಖುಷಿಯಲ್ಲಿ ಅಭ್ಯರ್ಥಿಯೋರ್ವ ಕಂಠಪೂರ್ತಿ ಕುಡಿದು ಬಂದು ಚುನಾವಣಾಧಿಕಾರಿಗಳಿಂದ ಪ್ರಮಾಣ ಪತ್ರವನ್ನು ಪಡೆದುಕೊಂಡು ಸುದ್ದಿಯಾಗಿದ್ದಾರೆ.
ವಿಜಯಪುರ ಜಿಲ್ಲೆ ಕೊಲ್ಹಾರ ತಾಲೂಕಿನ ಬಳೂತಿ ಆರ್ಸಿ ಗ್ರಾಮ ಪಂಚಾಯತಿಗೆ ನೂತನವಾಗಿ ಆಯ್ಕೆಯಾದ ರಾವುತಪ್ಪ ಮಟ್ಟಿಹಾಳ ಗೆದ್ದ ಖುಷಿಯಲ್ಲಿ ಜನ ನಗುವಂತೆ ಮಾಡಿದ್ದಾರೆ.
ಕಂಠಪೂರ್ತಿ ಕುಡಿದು ಬಾಯಿಗೆ ಬಂದಂತೆ ಭಾಷಣ ಬಿಗಿದಿದ್ದಾರೆ. ಬಡವರಿಗೆ ಫ್ಲ್ಯಾಟ್, ಹಣ ನೀಡಬೇಕು. ಶ್ರೀಮಂತರು ಮತ್ತೂ ಶ್ರೀಮಂತರಾಗಬೇಕು. ಅದೇ ನನ್ನ ಟೆಕ್ನಿಕ್ ಎಂದು ಎದೆ ಬಡಿದುಕೊಂಡು ಬೊಬ್ಬೆ ಹಾಕಿದ್ದಾರೆ. ಬಳಿಕ ಅಲ್ಲಿದ್ದ ಅಧಿಕಾರಿಗಳು ಮತ್ತು ಪೊಲೀಸರು ಅವರನ್ನು ಸಮಾಧಾನಪಡಿಸಿ ಕಳುಹಿಸಿದ್ದಾರೆ.