ಮುತ್ತಯ್ಯ ಮುರಳೀಧರನ್ ಬಯೋಪಿಕ್ ನಿಂದ ಹಿಂದೆ ಸರಿದಿದ್ದೇನೆ; ತಮಿಳಿನ ಖ್ಯಾತ ನಟ ವಿಜಯ್ ಸೇತುಪತಿ ಸ್ಪಷ್ಟನೆ

vijay
Share on facebook
Share on twitter
Share on linkedin
Share on whatsapp
Share on telegram
Share on email
Share on print

ಚೆನ್ನೈ(19/10/2020); ಎಲ್ಲವೂ ಸರಿಯಾಗಿದ್ದಿದ್ದರೆ ಕಾಲಿವುಡ್ ಸೂಪರ್ ಸ್ಟಾರ್ ವಿಜಯ್ ಸೇತುಪತಿ ಮುತ್ತಯ್ಯ ಮುರಳೀಧರ್ ಆಗಿ ತೆರೆಯ ಮೇಲೆ ಮಿಂಚಬೇಕಿತ್ತು. ಆದರೆ, ಮುರಳೀಧರನ್ ಎಂದರೆ, ಕ್ರಿಕೆಟ್ ಲೋಕಕ್ಕೆ ಸ್ಪಿನ್ ಮಾಂತ್ರಿಕನಾಗಿದ್ದರೂ ತಮಿಳು ಜನರಿಗೆ ಅಷ್ಟಕ್ಕಷ್ಟೇ. ತಮ್ಮ ಇಷ್ಟದ ನಟ ವಿಜಯ್ ಸೇತುಪತಿ ಮುರಳೀಧರ್ ಅವರ ಪಾತ್ರದಲ್ಲಿ ನಟಿಸಬಾರದು ಎಂದು ಅಭಿಮಾನಿಗಳು ಪ್ರತಿಭಟಿಸಿದರು.

ತಾನು ಮುರಳೀಧರ್ ಪಾತ್ರದಲ್ಲಿ ನಟಿಸುವುದಾಗಿ ಘೋಷಿಸಿದ ಬೆನ್ನಿಗೇ ವಿವಾದ ಭುಗಿಲೆದ್ದಿತು. ವಿಜಯ್ ಸೇತುಪತಿ ತೀವ್ರ ಟೀಕೆಗೆ ಗುರಿಯಾದರು. ಇದೀಗ ಸ್ವತಃ ವಿಜಯ್ ಸೇತುಪತಿ ಅವರೇ ಮುರಳೀಧರನ್ ಅವರ ಕೋರಿಕೆಯ ಮೇರೆಗೆ  ತಾವು ಮುರಳೀಧರನ್ ಪಾತ್ರದಿಂದ ಹಿಂದೆ ಸರಿಯುತ್ತಿರುವುದಾಗಿ ತಿಳಿಸಿದ್ದಾರೆ.

ವಿಜಯ್ ಸೇತುಪತಿಯ ಭವಿಷ್ಯಕ್ಕೆ ಯಾವುದೇ ತೊಂದರೆಯಾಗಬಾರದೆಂಬ ಕಾಳಜಿಯಿಂದ ಮುತ್ತಯ್ಯ ಮುರಳೀಧರನ್ ಹಾಗೆ ಹೇಳಿದ್ದಾರೆಂದು ವಿಜಯ್ ಸೇತುಪತಿ ತಿಳಿಸಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು