ಮಂಗಳೂರು(25-11-2020): ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ವಿಘ್ನೇಶ್ ನಾಯಕ್ ಆತ್ಮಹತ್ಯೆ ಹಲವು ಸಂಶಯಕ್ಕೆ ಆಸ್ಪದವನ್ನು ನೀಡಿದೆ.
ವಿಘ್ನೇಶ್ ಭಾನುವಾರ ಮಂಗಳೂರಿನ ವಿ.ಟಿ ರಸ್ತೆಯಲ್ಲಿನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಮದುವೆ ಮುರಿದು ಬಿದ್ದ ಕಾರಣಕ್ಕೆ ಆತ ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾನೆ ಎನ್ನಲಾಗಿತ್ತು. ಆದರೆ ಇಷ್ಟು ಸಣ್ಣ ವಿಚಾರಕ್ಕೆ ಆತ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲನಲ್ಲ ಎನ್ನುವುದು ಹಲವರ ಅಭಿಪ್ರಾಯ. ಆತ್ಮಹತ್ಯೆಯ ಹಿಂದೆ ವಿನಾಯಕ ಬಾಳಿಗನ ಕೊಲೆ ಪ್ರಕರಣದ ಆರೋಪಿಗಳ ಕೈವಾಡ ಇರುವ ಸಾಧ್ಯತೆ ಬಗ್ಗೆ ಕೂಡ ಜನರು ಮಾತನಾಡುತ್ತಿದ್ದಾರೆ.
ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಆರೋಪಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿ “ಜಸ್ಟೀಸ್ ಫಾರ್ ವಿನಾಯಕ ಬಾಳಿಗ’ ಅಭಿಯಾನ ಕೂಡ ಆರಂಭಿಸಲಾಗಿತ್ತು. ಬಾಳಿಗನ ಸಹೋದರಿ ಅನುರಾಧಾ ಬಾಳಿಗ ಅವರು ತನಿಖೆಗೆ ಎಸ್ಐಟಿ ರಚನೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದು, ಈ ಬಗ್ಗೆ ತನಿಖೆ ನಡೆದರೆ ಪ್ರಕರಣದ ನೈಜ ಆರೋಪಿ ಸೆರೆಯಾಗುತ್ತಿದ್ದರು. ಇದೀಗ ಪ್ರಕರಣದ ತನಿಖೆ ಹಂತದ ಮೊದಲೇ ಪ್ರಮುಖ ಸಾಕ್ಷಿ ಆತ್ಮಹತ್ಯೆ ಮಾಡಿಕೊಂಡಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.