ವಿದೇಶೀ ಯಾತ್ರಾರ್ಥಿಗಳಿಗೂ ಉಮ್ರಾ ನಿರ್ವಹಿಸಲು ಅವಕಾಶ | ವಿವಿಧ ಶರತ್ತುಗಳನ್ನಿಟ್ಟ ಸೌದಿ ಅರೇಬಿಯಾ

Share on facebook
Share on twitter
Share on linkedin
Share on whatsapp
Share on telegram
Share on email
Share on print

ರಿಯಾದ್: ಸೌದಿ ಹಜ್ ಸಚಿವಾಲಯವು ಪವಿತ್ರ ರಮ್ಜಾನ್ ತಿಂಗಳಲ್ಲಿ ವಿದೇಶೀ ಯಾತ್ರಾರ್ಥಿಗಳಿಗೂ ಉಮ್ರಾ ನಿರ್ವಹಿಸಲು ಅವಕಾಶ ನೀಡಿದೆ. ಆದರೆ ಅದಕ್ಕೆ ವಿವಿಧ ಶರತ್ತುಗಳನ್ನೂ ಇಡಲಾಗಿದೆ.

ಸದ್ಯಕ್ಕೆ ಜಿಸಿಸಿ ದೇಶಗಳ ಪ್ರಜೆಗಳಿಗಷ್ಟೇ ಅವಕಾಶವಿರುವುದು. ಪ್ರತಿಯೊಬ್ಬ ಯಾತ್ರಾರ್ಥಿಯೂ ತನ್ನ ದೇಶದಲ್ಲೇ ಕೋವಿಡ್ ಲಸಿಕೆಯನ್ನು ಪಡೆದ ಬಳಿಕವೇ ಉಮ್ರಾ ಯಾತ್ರೆಗೆ ತೆರಳಬೇಕಿದೆ.

ಲಸಿಕೆ ಪಡೆಯದೇ ಉಮ್ರಾ ಮಾಡಲು ಸೌದಿ ಅರೇಬಿಯಾ ಪ್ರವೇಶಿಸುವವರನ್ನು ಅವರವರ ದೇಶಗಳಿಗೆ ಹಿಂದಿರುಗಿಸಲಾಗುವುದು. ಹೀಗೆ ಹಿಂದಿರುಗಿಸುವುದರ ಜವಾಬ್ಧಾರಿಯನ್ನು ಉಮ್ರಾ ಸೇವೆ ಒದಗಿಸುವ ಕಂಪೆನಿಗಳೇ ಹೊರಬೇಕಿದೆ ಎಂದು ಹಜ್ಉಮ್ರಾ ಸಚಿವಾಲಯದ ಅಬ್ದುಲ್ ಫತ್ತಾಹ್ ತಿಳಿಸಿದ್ದಾರೆ.

ಆಯಾ ದೇಶಗಳ ಸರಕಾರಗಳ ಮತ್ತು ಸೌದಿ ಆರೋಗ್ಯ ಸಚಿವಾಲಯದ ಮಾನ್ಯತೆ ಪಡೆದ ಕೋವಿಡ್ ಲಸಿಕೆ ಪ್ರಮಾಣಪತ್ರವು ಯಾತ್ರಾರ್ಥಿಗಳ ಕೈಯಲ್ಲಿರಬೇಕು. ಉಮ್ರಾ ಸೇವೆ ಒದಗಿಸುವ ಸಂಸ್ಥೆಗಳು ಯಾತ್ರಿಕರ ಕೈಯ್ಯಲ್ಲಿ ಲಸಿಕೆಯಪ್ರಮಾಣ ಪತ್ರ ಇರುವುದನ್ನು, ಪ್ರಯಾಣಕ್ಕೆ ಮೊದಲೇ ಖಚಿತಪಡಿಸಿಕೊಳ್ಳಬೇಕಿದೆ.

ಉಮ್ರಾ ನಿರ್ವಹಿಸುವ ಆರು ಗಂಟೆಗಳ ಮೊದಲು ಕೋವಿಡ್ ಲಸಿಕೆಯ ಪ್ರಮಾಣ ಪತ್ರವನ್ನುಇನಾಯಕೇಂದ್ರಗಳಲ್ಲಿ ಹಾಜರುಪಡಿಸಿ, ಧೃಢೀಕರಣ ಮಾಡಿಸಿಕೊಳ್ಳಬೇಕು. ಬಳಿಕ ಯಾತ್ರಾರ್ಥಿಗಳಿಗೆ ಇಲೆಕ್ಟ್ರಾನಿಕ್ ಕೈಬಳೆಗಳನ್ನು ಒದಗಿಸಲಾಗುವುದು.

ತವಕ್ಕಲ್ನಾ ಅಥವಾ ಇಅ್‍ತಮರ್ನಾ ಇವೆರಡು ಆ್ಯಪುಗಳಲ್ಲಿ ಯಾವುದಾದರೂ ಒಂದರ ಮೂಲಕ ಉಮ್ರಾ ಅನುಮತಿ ಪಡೆಯಬಹುದು. ಬಳಿಕ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ, ಮಸ್ಜಿದುಲ್ ಹರಮಿಗೆ ಪ್ರವೇಶಿಸಬೇಕು. ಸೂಚಿಸಲಾದ ಸಮಯ ಮಿತಿಯೊಳಗೆ ಉಮ್ರಾ ವಿಧಿವಿಧಾನಗಳನ್ನು ಪೂರೈಸಬೇಕಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು