ಜೈಪುರ(16/11/2020): ಅತ್ಯಾಚಾರ ಆರೋಪಿಯೊಬ್ಬ ಸಂತ್ರಸ್ತೆಯನ್ನು ಕೊಲೆ ಮಾಡಲು ಪ್ರಯತ್ನಿಸಿದ ಆಘಾತಕಾರಿ ಘಟನೆ ನಡೆದಿದೆ.
ಘಟನೆಯಿಂದ ಸಂತ್ರಸ್ತೆಯ ದೇಹದ ಶೇ. 50 ರಷ್ಟು ಬಾಗ ಸುಟ್ಟುಹೋಗಿದ್ದು, ಆರೋಪಿಗೆ ಶೇ.30 ರಷ್ಟು ಗಾಯಗಳಾಗಿವೆ.
ಅರೋಪಿಯು ಕಳೆದ 7 ತಿಂಗಳಿನಿಂದ ನಾಪತ್ತೆಯಾಗಿದ್ದ. ಇಂದು ದೀಪಾವಳಿ ಹಬ್ಬದ ನಿಮಿತ್ತ ಮನೆಗೆ ಬಂದವನು ನೆರೆಯಲ್ಲಿದ್ದ ಸಂತ್ರಸ್ತೆಯ ಮನೆಗೆ ನುಗ್ಗಿ ಬೆಂಕಿ ಹಚ್ಚಿ ಕೊಲೆಮಾಡಲು ಯತ್ನಿಸಿದ್ದಾನೆ. ಆರೋಪಿಯು ಸಂತ್ರಸ್ತೆಯ ಸಂಬಂಧಿ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಆತ್ಯಾಚಾರ ಆರೋಪಿ, ಆತನ ತಂದೆ ಹಾಗೂ ಇಬ್ಬರು ಸಹೋದರರನ್ನು ಬಂಧಿಸಲಾಗಿದೆ. ಘಟನೆ ವೇಳೆ ಸಂತ್ರಸ್ತೆ ಹಾಗೂ ಮುಖ್ಯ ಆರೋಪಿ ಇಬ್ಬರಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.