ಶೀಘ್ರದಲ್ಲೇ ವೇತನ ಹೆಚ್ಚಿಸುತ್ತೇವೆ. ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗಿ: ಸಾರಿಗೆ ಸಚಿವ | ಮಾರ್ಚ್ ತಿಂಗಳ ನೌಕರರ ವೇತನ ತಡೆ ಹಿಡಿಯಲು ಸರಕಾರ ಸೂಚನೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ವೇತನ ಹೆಚ್ಚಿಸಲು ಸರಕಾರ ಸಿದ್ಧವಿದೆ. ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗಿ ಎಂದು ಸಾರಿಗೆ ಸಚಿವ ಸವದಿ ಹೇಳಿದ್ದಾರೆ.

ಚುನಾವಣಾ ಆಯೋಗದೊಂದಿಗೆ ಚರ್ಚಿಸಿದ್ದೇವೆ. ವೇತನ ಹೆಚ್ಚಿಸಲು ಸರಕಾರ ತಯಾರಾಗಿದೆ. ಮುಷ್ಕರ ಮುಂದುವರಿಸಿದರೆ ಇಲಾಖೆಗೆ ನಷ್ಟವಾಗಿ, ವೇತನ ಕೊಡಲು ಕಷ್ಟವಾಗಬಹುದು. ನಾಳೆಯಿಂದ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಬೇಕೆಂದು ಸಚಿವರು ಸುದ್ದಿಗಾರರ ಜೊತೆಗೆ ಮಾತನಾಡುತ್ತಾ ಮನವಿ ಮಾಡಿಕೊಂಡರು.

ಅದೇ ವೇಳೆ ಸರಕಾರೀ ಅಧಿಕಾರಿಗಳ ಮನವಿಗೆ ಕ್ಯಾರೆನ್ನದ ನೌಕರರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಮುಂದಾಗಿರುವ ರಾಜ್ಯ ಸರಕಾರವು ಮಾರ್ಚ್ ತಿಂಗಳ ವೇತನವನ್ನು ತಡೆ ಹಿಡಿಯಲು ಮುಂದಾಗಿದೆ. ಮುಷ್ಕರ ಕೈ ಬಿಡುವವರೆಗೆ ಸಂಬಳ ಬಿಡುಗಡೆ ಮಾಡದಿರಲು ಸಾರಿಗೆ ನಿಗಮಗಳಿಗೆ ಸೂಚಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು