ಆಕ್ಸಿಜನ್, ಔಷಧಿ ಇತ್ಯಾದಿ ಅಗತ್ಯ ವೈದ್ಯಕೀಯ ಸಾಮಾಗ್ರಿಗಳ ಮೇಲಿನ ಎಲ್ಲಾ ತೆರಿಗೆಗಳನ್ನು ರದ್ದು ಪಡಿಸಬೇಕು: ಮೋದಿಗೆ ಮಮತಾ ಬ್ಯಾನರ್ಜಿ ಪತ್ರ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಕೋಲ್ಕತ್ತಾ: ಆಕ್ಸಿಜನ್, ಔಷಧಿ ಇತ್ಯಾದಿ ಅಗತ್ಯ ವೈದ್ಯಕೀಯ ಸಾಮಾಗ್ರಿಗಳ ಮೇಲಿನ ಎಲ್ಲಾ ತೆರಿಗೆಗಳನ್ನು ರದ್ದು ಪಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಮಮತಾ ಬ್ಯಾನರ್ಜಿ ಕೇಳಿಕೊಂಡಿದ್ದಾರೆ. ಮಮತಾ, ಪ್ರಧಾನಿಗೆ ಮೋದಿಗೆ ಬರೆದ ಪತ್ರದಲ್ಲಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಕೋವಿಡ್ ಮಹಾಮಾರಿಯ  ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಅಗತ್ಯವಾದ ನೆರವನ್ನು ಖಾತರಿಪಡಿಸಬೇಕು ಎಂದಿದ್ದಾರೆ.

ಹಲವು ಸಂಘಸಂಸ್ಥೆಗಳು, ವ್ಯಕ್ತಿಗಳು ರಾಜ್ಯದ ಜನರಿಗೆ ಅಗತ್ಯವಾಗಿ ಬೇಕಾದ ಆಕ್ಸಿಜನ್, ಕ್ರಯೋಜನಿಕ್ ಟ್ಯಾಂಕರುಗಳು, ಆಕ್ಸಿಜನ್ ಕಾನ್ಸಂಟ್ರೇಟುಗಳು ಮತ್ತಿತರ ಕೋವಿಡ್ ಚಿಕಿತ್ಸೆಗೆ ಬೇಕಾಗುವ ವೈದ್ಯಕೀಯ ಸಾಮಾಗ್ರಿಗಳನ್ನು ದಾನ ನೀಡಲು ಮುಂದೆ ಬಂದಿದ್ದಾರೆ. ವೇಳೆಯಲ್ಲಿ ವೈದ್ಯಕೀಯ ಸೇವೆಗಳನ್ನು ಜನರಿಗೆ ಸುಲಭದಲ್ಲಿ ಸಿಗುವಂತೆ ಮಾಡಲು, ಅಂತಹ ವಸ್ತುಗಳ ಮೇಲೆ ವಿಧಿಸಲಾಗಿರುವ ಸುಂಕಗಳನ್ನು ತೆಗೆದು ಹಾಕಬೇಕೆಂದು ಮಮತಾ ಪತ್ರದ ಮೂಲಕ ಒತ್ತಾಯಿಸಿದ್ದಾರೆ.

ಕೋವಿಡ್ ವಿಚಾರವಾಗಿ ಮೊದಲೂ ಪ್ರಧಾನಮಂತ್ರಿಗೆ ಮಮತಾ ಪತ್ರ ಬರೆದಿದ್ದು, ಲಸಿಕೆಯನ್ನು ಉಚಿತವಾಗಿ ಹಂಚಬೇಕೆಂದು ಕೇಳಿಕೊಂಡಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು