ಲೇಖಕ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ‘ಶ್ರೀ ಬಾಹುಬಲಿ ಅಹಿಂಸಾದಿಗ್ವಿಜಯಂ’ (ಮಹಾಕಾವ್ಯ) ಕೃತಿಗೆ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಜೊತೆಗೆ ಕರ್ನಾಟಕದ ಕೆ.ಎಸ್. ಮಹಾದೇವಸ್ವಾಮಿ ಅವರ ‘ಧೂಪದ ಮಕ್ಕಳು’ (ಸಣ್ಣ ಕಥಾ ಸಂಕಲನ) ಕೃತಿಗೆ 2020ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಮತ್ತು ಹ.ಸ. ಬ್ಯಾಕೋಡ ಅವರ ‘ನಾನೂ ಅಂಬೇಡ್ಕರ್’ ಕೃತಿಗೆ ಬಾಲ ಸಾಹಿತ್ಯ ಪುರಸ್ಕಾರ ಲಭಿಸಿದೆ.
