ದೂರವಾಣಿಯ ಮೂಲಕ ವೈದ್ಯರ ನಿರ್ದೇಶನ ಪಡೆಯುತ್ತಲೇ ಹೆರಿಗೆ ಕ್ರಿಯೆ ನಡೆಸಿದ ಅಧ್ಯಾಪಕಿ!

Share on facebook
Share on twitter
Share on linkedin
Share on whatsapp
Share on telegram
Share on email
Share on print

ಮೈಸೂರು: ಅಮೀರ್ ಖಾನ್ ನಟಿಸಿದ ತ್ರೀ ಈಡಿಯೆಟ್ಸ್ ಸಿನಿಮಾದಲ್ಲಿ ಡಾಕ್ಟರ್ ನಿರ್ದೇಶಿಸಿದಂತೆ ಹೆರಿಗೆ ನಡೆಸಿರುವುದನ್ನು ನೋಡಿದ್ದೇವೆ. ನಿಜ ಜೀವನದಲ್ಲೇ ಅಂತಹ ಒಂದು ಪ್ರಸಂಗ ನಡೆದಿರುವುದು ವರದಿಯಾಗಿದೆ.

ಕೊಡಗು ಜಿಲ್ಲೆಯ 35 ವಯಸ್ಸಿನ ಗರ್ಭಿಣಿ ಮಹಿಳೆ ಮಲ್ಲಿಕಾ ತನ್ನೆರಡು ಮಕ್ಕಳೊಂದಿಗೆ ಮೈಸೂರು ಪಾರ್ಕ್ ಸಂದರ್ಶಿಸಲು ಬಂದಿದ್ದರು.  ಮಧ್ಯೆ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ದಾರಿಹೋಕರು ಸಹಾಯಕ್ಕೆ ಧಾವಿಸಿ, ಅಂಬ್ಯುಲೆನ್ಸಿಗೆ ಕರೆ ಮಾಡಿದರಾದರೂ, ವೇಳೆಗಾಗಲೇ ಸಮಯ ಮೀರಿತ್ತು.

ಗುಂಪು ಗೂಡಿದವರಲ್ಲೊಬ್ಬಾಕೆ ತನ್ನ ಪರಿಚಯದ ಮುಂಬಯಿನಲ್ಲಿನ ವೈದ್ಯರೊಬ್ಬರಿಗೆ ತಕ್ಷಣವೇ ಕರೆ ಮಾಡಿ, ಕರೆಯನ್ನು ಹತ್ತಿರದಲ್ಲೇ ಇದ್ದ ಹೈಸ್ಕೂಲ್ ಅಧ್ಯಾಪಕಿಯಾದ ಶೋಭಾ ಎಂಬವರ  ಕೈಗಿತ್ತರು. ಕರೆಯಲ್ಲೇ ವೈದ್ಯರು ಹೆರಿಗೆ ನಡೆಸಲು ಬೇಕಾದ ನಿರ್ದೇಶನಗಳನ್ನು ನೀಡಿ, ಹೆರಿಗೆ ಮಾಡಿಸಿದರು.

ತಾಯಿಗೋ, ಮಗುವಿಗೋ ಏನಾದರೂ ತೊಂದರೆಯಾಗುವುದೋ ಎಂದು ನಾನು ನಿಜಕ್ಕೂ ಹೆದರಿದ್ದೆ. ಮತ್ತು ವೈದ್ಯರ ನಿರ್ದೇಶನವನ್ನು ಚಾಚೂ ತಪ್ಪದೇ ಪಾಲಿಸಿದ್ದೆ ಎನ್ನುತ್ತಾರೆ ಶೋಭಾ. ಹೆರಿಗೆ ನಡೆಸಿದರೂ ಹೊಕ್ಕುಳ ಬಳ್ಳಿ ಕತ್ತರಿಸುವ ಬಗ್ಗೆ ಗೊತ್ತಿರಲಿಲ್ಲ.  ವೇಳೆಗಾಗಲೇ ಅಂಬ್ಯುಲೆನ್ಸ್ ಸ್ಥಳಕ್ಕೆ ಧಾವಿಸಿ, ಅದನ್ನೂ ಕತ್ತರಿಸಿದರು ಹಾಗೂ ತಾಯಿ ಮತ್ತು ನವಜಾತಶಿಶುವನ್ನು ಆಸ್ಪತ್ರೆಗೆ ದಾಖಲಿಸಿದರು.

ತಾಯಿ ಮತ್ತು ಮಗು ಇಬ್ಬರೂ ಆರೋಗ್ಯದಿಂದಿದ್ದು, ಅಧ್ಯಾಪಕಿ ಶೋಭಾ ಮಲ್ಲಿಕಾ ಅವರನ್ನು ಸಂದರ್ಶಿಸಿ, ಧನಸಹಾಯವನ್ನೂ ಮಾಡಿದ್ದಾರೆ. ಆದಿವಾಸಿ ಬುಡಕಟ್ಟು ಜನಾಂಗಕ್ಕೆ ಸೇರಿದ ಮಲ್ಲಿಕಾ ಅವರು ಹೋಟೆಲ್ ಉದ್ಯೋಗಿಯಾಗಿದ್ದು, ಸದ್ಯ ಗಂಡನಿಂದ ಬೇರ್ಪಟ್ಟು ಜೀವಿಸುತ್ತಿದ್ದಾರೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು