ವೇದಾಂತ ಗ್ರೂಪಿನಿಂದ ತಾಮ್ರ ಸಂಸ್ಕರಣಾ ಘಟಕ ಪುನರಾರಂಭ ಸಾಧ್ಯತೆ | ಸ್ಥಳೀಯರಿಂದ ತೀವ್ರ ಪ್ರತಿಭಟನೆ ಎದುರಾಗುವ ಆತಂಕದಲ್ಲಿ ತಮಿಳುನಾಡು ಸರಕಾರ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಚೆನ್ನೈ: ತೂತುಕುಡಿಯಲ್ಲಿರುವ ಸ್ಟೆರ್ ಲೈಟ್ ತಾಮ್ರ ಸಂಸ್ಕರಣಾ ಘಟಕವನ್ನು ಪುನರಾರಂಭಿಸುವ ಸಾಧ್ಯತೆಯಿರುವುದು ನಿಚ್ಛಳವಾಗಿದೆ. ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಲಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರಕಾರವು ಆತಂಕಕ್ಕೀಡಾಗಿದೆ.

ದೇಶಾದ್ಯಂತ ಆಮ್ಲಜನಕದ ಕೊರತೆ ಕಾಡುತ್ತಿದ್ದರೂ, ಆಮ್ಲಜನಕ ಉತ್ಪಾದನೆಗಾಗಿ ಸ್ಟೆರ್ ಲೈಟ್ ತಾಮ್ರ ಸಂಸ್ಕರಣಾ ಘಟಕವನ್ನು ತೆರೆಯಲು ಅನುಮತಿ ನೀಡದ ತಮಿಳುನಾಡು ಸರಕಾರವನ್ನು ಸುಪ್ರೀಮ್ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಸ್ಟರ್ ಲೈಟ್ ಕಂಪೆನಿಯನ್ನು ಪುನರಾರಂಭಿಸಲು ಅನುಮತಿ ನೀಡಬೇಕೆಂದು ಕೋರಿ ವೇದಾಂತ ಗ್ರೂಪ್ ಸುಪ್ರೀಮ್ಕೋರ್ಟ್ ಮೆಟ್ಟಿಲೇರಿತ್ತು.

ಸ್ಟೆರ್ ಲೈಟ್ ತಾಮ್ರ ಸಂಸ್ಕರಣಾ ಘಟಕವನ್ನು ಆಮ್ಲಜನಕ ಉತ್ಪಾದನೆಗಾಗಿ ತೆರೆಯಲು ಸುಪ್ರೀಮ್ ಕೋರ್ಟ್ ನಿರ್ದೇಶನ ನೀಡಿದೆ. ಘಟಕವನ್ನು ವೇದಾಂತ ಅಥವಾ , ಬಿ ಅಥವಾ ಸಿ ನಡೆಸುತ್ತಿದೆ ಎಂಬುದರಲ್ಲಿ ನಮಗೆ ಆಸಕ್ತಿ ಇಲ್ಲ. ಆಮ್ಲಜನಕವನ್ನು ಉತ್ಪಾದಿಸುವ ಬಗ್ಗೆ ನಾವು ಆಸಕ್ತಿ ಹೊಂದಿದ್ದೇವೆಎಂದು ಮುಖ್ಯ ನ್ಯಾಯಮೂರ್ತಿ ಎಸ್.. ಬೊಬ್ಡೆ ನೇತೃತ್ವದ ನ್ಯಾಯಪೀಠ ಹೇಳಿತ್ತು. ಎಸ್..ಬೊಬ್ಡೆ ಈಗಾಗಲೇ ನಿವೃತ್ತಿ ಹೊಂದಿರುವುದರಿಂದ ಸದ್ಯ ನ್ಯಾಯ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಲ್.ಎನ್. ರಾವ್ ಮತ್ತು ಎಸ್.ಆರ್. ಭಟ್ ಇದ್ದಾರೆ.

ಪರಿಸರಕ್ಕೆ ಹಾನಿಯುಂಟಾಗಬಹುದೆಂಬ ಕಾರಣದಿಂದ ಸ್ಥಳೀಯರ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಸ್ಟೆರ್ ಲೈಟ್ ತಾಮ್ರ ಸಂಸ್ಕರಣಾ ಘಟಕವನ್ನು ಮುಚ್ಚಲಾಗಿತ್ತು. ಪುನಃ ತೆರೆಯುವ ಹಿನ್ನೆಲೆಯಲ್ಲಿ ಮುಂದೆ ಉಂಟಾಗಬಹುದಾದ ವಿಷಮ ಪರಿಸ್ಥಿತಿಯನ್ನು ನಿರ್ವಹಣೆ ಮಾಡುವ ಪ್ರಯತ್ನದ ಭಾಗವಾಗಿ ತಮಿಳುನಾಡು ಮುಖ್ಯಮಂತ್ರಿಯು ಸರ್ವಪಕ್ಷಗಳ ಸಭೆ ಕರೆದಿದ್ದಾರೆ.

2018 ರಲ್ಲಿ ಸ್ಟೆರ್ ಲೈಟ್ ತಾಮ್ರ ಸಂಸ್ಕರಣಾ ಘಟಕವನ್ನು ವಿರೋಧಿಸಿದ ಸ್ಥಳೀಯ ಪ್ರತಿಭಟನಕಾರರ ಮೇಲೆ ಪೋಲೀಸರು ನಡೆಸಿದ ಗೋಲಿಬಾರಿಗೆ ಹದಿಮೂರು ಮಂದಿ ಬಲಿಯಾಗಿದ್ದರು.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು