ಕೋಲಾರ (12-02-2020): ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್, ಚಿತ್ರಹಿಂಸೆ ಹಿಂದೆ ಮಹಿಳೆಯ ಕೈವಾಡ ಇದೆಯಾ ಎಂಬ ಶಂಕೆ ವ್ಯಕ್ತವಾಗಿದೆ.
ವರ್ತೂರು ಪ್ರಕಾಶ್ ಅವರನ್ನು ಕಿಡ್ನಾಪ್ ಮಾಡಿದ್ದ ಕಾರು ಬೆಳ್ಳಂದೂರಿನಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.ಕಾರಿನಲ್ಲಿ ಆರೋಪಿಗಳ ಬಗ್ಗೆ ಮಹತ್ವದ ಸುಳಿವು ಸಿಕ್ಕಿದೆ ಎಂದು ಹೇಳಲಾಗಿದೆ.
ಕಾರಿನಲ್ಲಿ ಒಂದು ದುಪ್ಪಟ್ಟ ಕಂಡುಬಂದಿದ್ದು, ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅಪಹರಣದ ಪ್ರಕರಣದಲ್ಲಿ ಹೆಣ್ಣಿನ ಕೈವಾಡ ಇರುವ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಇನ್ನು ತನಿಖೆಯ ದಿಕ್ಕು ತಪ್ಪಿಸುವ ತಂತ್ರವಾ ಎಂಬ ಶಂಕೆ ಕೂಡ ಕಾಡುತ್ತಿದೆ.
ಇತ್ತೀಚೆಗೆ ಮಾಜಿ ಸಚಿವ ವರ್ತೂರು ಪ್ರಕಾಶ್ ಅವರನ್ನು ತಂಡವೊಂದು ಕಿಡ್ನಾಪ್ ಮಾಡಿ ಕಾಡಿನಲ್ಲಿ ಚಿತ್ರಹಿಂಸೆ ನೀಡಿ 50ಲಕ್ಷರೂ. ವಸೂಲಿ ಮಾಡಿ ಹೊಸಕೇಟೆ ಬಳಿ ಬಿಟ್ಟು ಹೋಗಿದ್ದರು.