ವಾಹನದ ನೋಂದಣಿ ಫಲಕದಲ್ಲಿ ಹೆಸರುಗಳಿವೆಯೇ? ಹಾಗಾದರೆ ದಂಡ ಖಚಿತ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ಸಾರಿಗೆಯ ಇಲಾಖೆಯ ಹೊಸ ಆದೇಶದ ಪ್ರಕಾರ, ವಾಹನದ ನೋಂದಣಿ ಫಲಕದಲ್ಲಿ ಹೆಸರುಗಳೋ, ಅಕ್ಷರಗಳೋ ಇದ್ದರೆ ದಂಡ ಕಟ್ಟಬೇಕಾಗಿ ಬರಬಹುದು.

ಒಂದು ವೇಳೆ ವಾಹನ ಸವಾರ/ಮಾಲಿಕರ ಹುದ್ದೆಯ ಹೆಸರು ಅಥವಾ ಇಲಾಖೆಯ ಹೆಸರು ಬರೆದರೂ ದಂಡ ಅನ್ವಯವಾಗುವುದು.

ಮೋಟರು ವಾಹನ ಕಾಯ್ದೆ 50-51  ಹಾಗೂ 1950 ಕಲಂ 3,4ರಂತೆ ನೋಂದಣಿ ಫಲಕದಲ್ಲಿ ನಂಬರ್ ಫಲಕದಲ್ಲಿ ಯಾವುದೇ ಸಂಘ ಸಂಸ್ಥೆಗಳ ಹೆಸರುಗಳನ್ನು ಹಾಕಿಕೊಳ್ಳುವುದು, ಮಾನವ ಹಕ್ಕುಗಳ ಆಯೋಗಗಳ ಹೆಸರನ್ನು ಹೋಲುವಂತಹ ರಾಪ್ಟ್ರೀಯರಾಜ್ಯ ಮಾನವ ಹಕ್ಕುಗಳ ಸಂಸ್ಥೆ, ಒಕ್ಕೂಟ ಇತ್ಯಾದಿ ಹೆಸರುಗಳನ್ನು, ಚಿಹ್ನೆ, ಲಾಂಛನಗಳನ್ನು ಹಾಕಿಕೊಳ್ಳುವುದು ಎಲ್ಲವೂ ಅಪರಾಧವಾಗಿರುತ್ತದೆ.

ಮಾರ್ಚ್ ಹನ್ನೆರಡರಂದು ಬಂದ ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಾರಿಗೆ ಇಲಾಖೆಯು ತೀರ್ಮಾನಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು