ಔಷಧಿಗಳು ಆಕಾಶದಿಂದ ! ಲಸಿಕೆ ವಿತರಣೆಗೆ ಡ್ರೋನುಗಳ ಬಳಕೆ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಹೈದರಾಬಾದ್: ಕೋವಿಡ್ ಮಹಾಮಾರಿಯು ದೇಶದ ಮೇಲೆ ಪೂರ್ಣ ಪ್ರಮಾಣದ ದಾಳಿ ಮಾಡಿದೆ. ಕೋವಿಡಿನ ವಿರುದ್ಧದ ಹೋರಾಟವೂ ಯುದ್ಧೋಪಾದಿಯಲ್ಲಿ ನಡೆಯಬೇಕಿದೆ. ಇದೀಗ ಆಧುನಿಕ ಯುದ್ಧಗಳಲ್ಲಿ ಬಳಸಲಾಗುವ ಡ್ರೋನುಗಳನ್ನು ಕೋವಿಡ್ ವಿರುದ್ಧದ ಯುದ್ಧದಲ್ಲೂ ಬಳಸುವ ಪ್ರಯತ್ನ ನಡೆಯುತ್ತಿದೆ.

ಹೌದು.. ತೆಲಂಗಾಣ ಸರಕಾರವು ಲಸಿಕೆ ವಿತರಣೆ ಮಾಡಲು ಡ್ರೋನುಗಳನ್ನು ಬಳಸಲಿದೆ. ಇದಕ್ಕಾಗಿ ಅದು ನಾಗರಿಕ ವಿಮಾನಯಾನ ಸಚಿವಾಲಯವನ್ನು ಸಂಪರ್ಕಿಸಿತ್ತು. ಈಗ ಡ್ರೋನ್ ಬಳಕೆಗೆ ಅನುಮತಿಯೂ ಸಿಕ್ಕಿದೆ. ಮುಂದಿನ ಒಂದು ವರ್ಷದ ವರೆಗೆ ಲಸಿಕೆ ವಿತರಣೆಗಾಗಿ ಡ್ರೋನ್ ಬಳಸಲು ಅನುಮತಿ ಇರಲಿದೆ.

ಉಳಿದ ರಾಜ್ಯಗಳು ಅನುಮತಿ ಕೇಳಿದರೆ, ಕೋವಿಡ್ ಸಂದಿಗ್ಧತೆಯ ಹಿನ್ನೆಲೆಯಲ್ಲಿ ಅವರಿಗೂ ಅನುಮತಿ ದೊರಕುವ ಸಾಧ್ಯತೆಯಿದೆ. ಹಾಗಿರುವಾಗ ಮೇಲೆ ಆಕಾಶದಿಂದ ಡ್ರೋನುಗಳ ಹಾರಾಟ ಕಂಡು ಬಂದರೆ, ಪ್ರದೇಶದ ಜನ ತಮ್ಮ ಪ್ರದೇಶಗಳಲ್ಲಿ ಲಸಿಕೆ ಮುಟ್ಟಿದೆ ಎಂದು ಊಹಿಸುವ ಸನ್ನಿವೇಶವೂ ಬರಬಹುದು.

ಔಷಧಿಗಳು ಆಕಾಶದಿಂದಎಂಬ ಹೆಸರಿನಲ್ಲಿ ತೆಲಂಗಾಣ ರಾಜ್ಯ ಸರಕಾರವು ಶೀಘ್ರದಲ್ಲೇ ಡ್ರೋನ್ ಮೂಲಕ ಲಸಿಕೆ ವಿತರಣೆ ಕಾರ್ಯ ನಡೆಸಲಿದೆ. ಮೂಲಕ ಒಳಪ್ರದೇಶಗಳಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ, ಅಂತಹ ಪ್ರದೇಶಗಳಲ್ಲಿ ಬೀಡು ಬಿಟ್ಟಿರುವ ಆರೋಗ್ಯ ಸಿಬ್ಬಂದಿಗಳಿಗೆ ಶೀಘ್ರವಾಗಿ ಮತ್ತು ಸುಲಭವಾಗಿ ಲಸಿಕೆ ದೊರೆಯಲಿದೆ.

ನಾಳೆಯೇ ಇದರ ಪರೀಕ್ಷಾರ್ಥ ಹಾರಾಟವು ವಿಕ್ರಮಾಬಾದ್ ಸರಕಾರೀ ಆಸ್ಪತ್ರೆಯಲ್ಲಿ ನಡೆಯಲಿದೆ. ಮೂಲಕ ಡ್ರೋನ್ಮೂಲಕ ಕೋವಿಡ್ ಲಸಿಕೆ ವಿತರಿಸುವ ಮೊದಲ ರಾಜ್ಯವಾಗಿ ತೆಲಂಗಾಣ ಗುರುತಿಸಿಕೊಳ್ಳಲಿದೆ. ಲಾಕ್ಡೌನ್, ಸಾಮಾಜಿಕ ಅಂತರ ಮೊದಲಾದ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಬೇಕಾದ ಹೊತ್ತಿನಲ್ಲಿ ಡ್ರೋನ್ ಬಳಕೆಯು ಒಂದು ವರದಾನವಾಗಿ ಪರಿಣಮಿಸಿದೆ.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು