ವ್ಯಾಕ್ಸಿನ್ ವಿಷಯದಲ್ಲಿ ಜನರಿಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ ಮೊದಲು ಜೀವ ಉಳಿಸುವ ಕೆಲಸ ಮಾಡಿ : ಸಿಎಂಗೆ ಎಸ್.ಆರ್.ಪಾಟೀಲ್ ಆಗ್ರಹ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಬೆಂಗಳೂರು: ರಾಜ್ಯದ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಹೋದವರನ್ನು ವಾಪಸ್ ಕಳಿಸಲಾಗುತ್ತಿದೆ. ಹಿರಿಯ ನಾಗರೀಕರು ವ್ಯಾಕ್ಸಿನೇಶನ್ ಸೆಂಟರ್ ಗಳಿಗೆ ಅಲೆಯುವಂತಾಗಿದೆ. ಪರಿಸ್ಥಿತಿ ಹೀಗಿರುವಾಗ 18 ವರ್ಷ ಮೀರಿದವರಿಗೂ ವ್ಯಾಕ್ಸಿನ್ ಕೊಡ್ತೀವಿ ಅಂತ ಈ ಭಂಡ ರಾಜ್ಯ ಬಿಜೆಪಿ ಸರ್ಕಾರ ಸುಳ್ಳು ಹೇಳುತ್ತಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಎಸ್.ಆರ್.ಪಾಟೀಲ್ ಆರೋಪಿಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿದ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ,
ಕರ್ನಾಟಕದಲ್ಲಿ ವ್ಯಾಕ್ಸಿನ್ ನ ತೀವ್ರ ಅಭಾವ ಇದೆ. ಇಡೀ ರಾಜ್ಯದಲ್ಲಿ ವ್ಯಾಕ್ಸಿನ್ ಅಭಿಯಾನ ಕುಂಟುತ್ತಾ ಸಾಗಿದ. ಕಳೆದ ಒಂದು ತಿಂಗಳಿನಿಂದ ಪ್ರತಿ ದಿನ ಸರಾಸರಿ 30ರಿಂದ 40ಸಾವಿರ ಪಾಸಿಟಿವ್ ಕೇಸ್ ಗಳು ಪತ್ತೆಯಾಗುತ್ತಿವೆ. ದಿನಕ್ಕೆ 200 ಕ್ಕೂ ಹೆಚ್ಚು ಜನ ಸಾಯುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ರಾಜ್ಯದಲ್ಲಿ ವ್ಯಾಕ್ಸಿನ್ ಸಂಗ್ರಹವೇ ಇಲ್ಲ ಎಂದಿದ್ದಾರೆ.

ಕರ್ನಾಟಕದ ಒಟ್ಟಾರೆ ಆಕ್ಸಿಜನ್ ಬೇಡಿಕೆ ದಿನಕ್ಕೆ 1,800 ಮೆಟ್ರಿಕ್ ಟನ್ ನಷ್ಟಿದೆ. ಆದ್ರೆ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪ್ರತಿ ದಿನ ಕೇವಲ 865 ಮೆಟ್ರಿಕ್ ಟನ್ ನಷ್ಟು ಆಕ್ಸಿಜನ್ ಮಾತ್ರ ಪೂರೈಕೆಯಾಗುತ್ತಿದೆ. ಅಂದರೆ ರಾಜ್ಯದಲ್ಲಿ ಪ್ರತಿ ದಿನ 935 ಮೆಟ್ರಿಕ್ ಟನ್ ಆಕ್ಸಿಜನ್ ಕೊರತೆ ಇದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೇ ವ್ಯಾಕ್ಸಿನ್ ವಿಷಯದಲ್ಲಿ ರಾಜ್ಯದ ಜನರಿಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ ಮೊದಲು ಜನರ ಜೀವ ಉಳಿಸುವ ಕೆಲಸ ಮಾಡಿ. ರಾಜ್ಯದ ಪಾಲಿನ ವ್ಯಾಕ್ಸಿನ್ ಅನ್ನು ಕೇಂದ್ರದಿಂದ ಪಡೆಯಲು ಇರುವ ಅಡ್ಡಿಯಾದರೂ ಏನು? 2 ಕೋಟಿ ಡೋಸ್ ವ್ಯಾಕ್ಸಿನ್ ಖರೀದಿ ಆದೇಶವಾಗಿದೆ ಎಂದಿರಲ್ಲ ಅದು ಯಾವಾಗ ಬರುತ್ತೆ..? ರಾಜ್ಯಕ್ಕೆ ಬೇಕಾಗುವಷ್ಟು ಆಕ್ಸಿಜನ್ ಅನ್ನು ಪೂರೈಕೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಆದೇಶ ಮಾಡಿದೆ. ಕೇಂದ್ರ ಸರ್ಕಾರ ಕೂಡಲೇ ರಾಜ್ಯಕ್ಕೆ ಅತ್ಯಗತ್ಯವಾಗಿ ಬೇಕಾದ 1,800 ಮೆಟ್ರಿಕ್ ಟನ್ ಆಕ್ಸಿಜನ್ ಅನ್ನು ಕೂಡಲೇ ಪೂರೈಕೆ ಮಾಡಬೇಕು ಎಂದು ಎಸ್.ಆರ್.ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಒಂದು ವೇಳೆ ಕೇಂದ್ರ ಸರ್ಕಾರ ನಮ್ಮ ರಾಜ್ಯದ ಬೇಡಿಕೆಯಷ್ಟು ಆಕ್ಸಿಜನ್ ಪೂರೈಕೆ ಮಾಡುವಲ್ಲಿ ವಿಫಲವಾದರೆ ಸಾವಿರಾರು ಕೊರೊನಾ ಸೋಂಕಿತರು ಜೀವ ಬಿಡಬೇಕಾಗುತ್ತದೆ. ಆಕ್ಸಿಜನ್ ಇಲ್ಲದೇ ಸಂಭವಿಸುವ ಪ್ರತೀ ಸಾವುಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಹೊಣೆಗಾರರಾಗಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಎಸ್.ಆರ್. ಪಾಟೀಲ್ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

 

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು