ಉತ್ತರ ಪ್ರದೇಶದಲ್ಲೂ ತೀವ್ರವಾಗಿ ಹರಡುತ್ತಿರುವ ಕೊರೋನಾ | ಆದಿತ್ಯನಾಥ್ ಪ್ರತ್ಯೇಕ ವಾಸದಲ್ಲಿ

Share on facebook
Share on twitter
Share on linkedin
Share on whatsapp
Share on telegram
Share on email
Share on print

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ಪ್ರತ್ಯೇಕ ವಾಸಕ್ಕೆ ಒಳಗಾಗಿದ್ದಾರೆ. ಆದಿತ್ಯನಾಥ್ ಸಂಪರ್ಕದಲ್ಲಿದ್ದ ಕೆಲವರಿಗೆ ಕೋವಿಡ್ ದೃಢಪಟ್ಟಿತ್ತು.

ನನ್ನ ಜತೆ ಸಂಪರ್ಕದಲ್ಲಿದ್ದ ಕೆಲವರಲ್ಲಿ ಕೋವಿಡ್ ದೃಢಪಟ್ಟಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರತ್ಯೇಕ ವಾಸದಲ್ಲಿದ್ದೇನೆ. ಓನ್ಲೈನ್ ಮೂಲಕ ಕಾರ್ಯನಿರ್ವಹಿಸುತ್ತಿದ್ದೇನೆಎಂದು ಆದಿತ್ಯನಾಥ್ ಟ್ವೀಟಿಸಿದ್ದಾರೆ. ಕೊರೋನಾ ದೃಢಪಟ್ಟ ಅಧಿಕಾರಿಗಳ ಹೆಸರುಗಳನ್ನು ಆದಿತ್ಯನಾಥ್ ಬಹಿರಂಗ ಪಡಿಸಿಲ್ಲ.

ನಿನ್ನೆಯ ದಿನ ಯುಪಿಯಲ್ಲಿ ದಾಖಲೆಯ ಪ್ರಮಾಣದ ಕೋವಿಡ್ ಪ್ರಕರಣಗಳು ದೃಢಪಟ್ಟಿದೆ. 18021 ಜನರಿಗೆ ಸೋಂಕು ತಗುಲಿದೆ. ಇದು ಒಂದೇ ದಿನದಲ್ಲಿ ದಾಖಲಾದ ಸಂಖ್ಯೆಗಳಲ್ಲೇ ಅತಿ ಹೆಚ್ಚಿನದು.

ಯುಪಿಯಲ್ಲಿ ನಿನ್ನೆ ಕೊರೋನಾ ವಾಸಿಯಾದವರ ಸಂಖ್ಯೆ 3474ಈಗ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ 95000 ಕ್ಕೂ ಹೆಚ್ಚು. ಈ ವರೆಗೆ ಕೋವಿಡ್ ಬಾಧಿಸಿ ಮೃತಪಟ್ಟವರ ಒಟ್ಟು ಸಂಖ್ಯೆ 9309.

Like us:

ಪ್ರಮುಖ ಸುದ್ದಿಗಳು

ರಾಷ್ಟ್ರೀಯ ಸುದ್ದಿಗಳು